Header Ads
Header Ads
Breaking News

ಅ. 18ರಂದು ಎಸ್‍ಎಸ್‍ಎಫ್ ವತಿಯಿಂದ 100ನೇ ರಕ್ತದಾನ ಶಿಬಿರ

ದಕ್ಷಿಣ ಕನ್ನಡ ಜಿಲ್ಲಾ ಎಸ್‍ಎಸ್‍ಎಫ್‍ನ ಬ್ಲಡ್ ಸೈಬೋ ಆಧೀನದಲ್ಲಿ ಜಿಲ್ಲಾ ಮಟ್ಟದ 100ನೇ ರಕ್ತದಾನ ಶಿಬಿರ ಅ. 18 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಎಸ್‍ಎಸ್‍ಎಫ್ ಜಿಲ್ಲಾ ಸಮಿತಿ ಸದಸ್ಯ ಎ.ಎಂ.ಫೈಝಲ್ ಝುಹ್ರಿ ಕಲ್ಲುಗುಂಡಿ ಹೇಳಿದರು.ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಎಸ್‍ಎಸ್‍ಎಫ್ ರಕ್ತದಾನಿಗಳ ತಂಡವನ್ನು ಕಟ್ಟಿ ಬೆಳೆಸಿದ್ದು ಎರಡು ದಶಕಗಳಲ್ಲಿ ಸಾವಿರಾರು ಮಂದಿಗೆ ರಕ್ತದಾನದ ಮೂಲಕ ಜೀವದಾನ ನೀಡಿದೆ. ಇದಕ್ಕಾಗಿ ಕಳೆದ 2 ವರ್ಷಗಳಿಂದ ಬ್ಲಡ್ ಸೈಬೋ ಎಂಬ ಪ್ರತ್ಯೇಕ ತಂಡ ಅಸ್ತಿತ್ವದಲ್ಲಿದ್ದು , ಬ್ಲಡ್ ಸೈಬೋ ಮೂಲಕ ಜಿಲ್ಲೆದಾತ್ಯಂತ 99 ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದರು

ಈ ಸಂದರ್ಭ ಕಾರ್ಯದರ್ಶಿ ಅಂದುಂಞ ಗೋರಡ್ಕ, ಎಸ್‍ಎಸ್‍ಎಫ್ ಸುಳ್ಯ ಸೆಕ್ಟರ್ ಅಧ್ಯಕ್ಷ ಸ್ವಬಾಹ್ ಹಿಮಮಿ, ಸುಳ್ಯ ಡಿವಿಷನ್ ಉಸ್ತುವಾರಿ ಅಬೂಬಕ್ಕರ್ ಸಿದ್ದಿಕ್ ಗೂನಡ್ಕ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *