Header Ads
Header Ads
Breaking News

ಅ.2: ಕೊಣಾಜೆಯಿಂದ ಮುಡಿಪು ಜಂಕ್ಷನ್‌ವರೆಗೆ ಆರೋಗ್ಯಕ್ಕಾಗಿ ನಡಿಗೆ

ಉಳ್ಳಾಲ: ಗಾಂಧೀ ಜಯಂತಿಯಂದು ಕೊಣಾಜೆ ಮಂಗಳೂರು ವಿಶ್ವವಿದ್ಯಾಲಯದ ಪ್ರೊ. ಬಿ. ಶೇಕ್ ಅಲಿ ರಸ್ತೆಯಿಂದ ಮುಡಿಪು ಜಂಕ್ಷನ್ ವರೆಗೆ ’ಆರೋಗ್ಯಕ್ಕಾಗಿ ನಡಿಗೆ’ ಕಾರ್ಯಕ್ರಮ ನಡೆಯಲಿದೆ ಎಂದು ಮುಡಿಪು ವರ್ತಕರ ಸಂಘದ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ ತಿಳಿಸಿದರು.ಮುಡಿಪುವಿನಲ್ಲಿ ಶುಕ್ರವಾರ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ಆರೋಗ್ಯದ ಕುರಿತಾಗಿ ಜಾಗೃತಿ ಮೂಡಿಸುವ ಸಲುವಾಗಿ ಮಂಗಳವಾರ ಬೆಳಗ್ಗೆ ಗಂಟೆ 6.30೦ಕ್ಕೆ ನಡಿಗೆ ಆರಂಭಗೊಳ್ಳಲಿದೆ. ಸ್ವಯಂಸೇವಾ ಸಂಘಟನೆಗಳು, ವರ್ತಕರು ಹಾಗೂ ನಾಗರಿಕರ ಸಹಕಾರದಲ್ಲಿ ನಡೆಯಲಿರುವ ನಡಿಗೆ ಕಾರ್ಯಕ್ರಮದಲ್ಲಿ ಆಯುಷ್ ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶೋಭಾರಾಣಿ ಅವರು “ಆರೋಗ್ಯವೇ ಭಾಗ್ಯ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ. ಯುವಜನತೆ ತಮ್ಮ ಜೀವನಶೈಲಿ ಹಾಗೂ ಆಹಾರ ಸೇವನೆಯಿಂದ ಹೆಚ್ಚಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇವೆಲ್ಲದರ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ಮಾತನಾಡಿ ‘ ನಮ್ಮ ಜೀವನಶೈಲಿ ಆಹಾರ ಪದ್ಧತಿ, ಜಂಕ್ ಫುಡ್, ರಾಸಾಯನಿಕ ಬೆರೆಸಿದ ಆಹಾರ ಪದಾರ್ಥಗಳ ಸೇವನೆಯಿಂದ ಮನುಷ್ಯನ ಆರೋಗ್ಯ ಹಾಳುಗೆಡಹುತ್ತಿದೆ. ಹಾಗಾಗಿ ಜನತೆಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ನಡೆಯಲಿದೆ ಎಂದರು. ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಸದಸ್ಯ ಹೈದರ್ ಕೈರಂಗಳ, ಬಾಳೆಪುಣಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾಸೀರ್ ನಡುಪದವು, ಶರೀಫ್ ಚೆಂಬೆತೋಟ ಹಾಗೂ ಡಾ.ಸುರೇಖ ಉಪಸ್ಥಿತರಿದ್ದರು.

Related posts

Leave a Reply