Header Ads
Breaking News

ಅ.2 ರಂದು ಜನಜಾಗೃತಿ ವೇದಿಕೆ ವತಿಯಿಂದ ಸುಳ್ಯದಲ್ಲಿ ವ್ಯಸನ ಮುಕ್ತರ ಸಮಾವೇಶ

ಜನಜಾಗೃತಿ ವೇದಿಕೆ ಸುಳ್ಯ ತಾಲೂಕು ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ನವಜೀವನ ಸಮಿತಿ ಸುಳ್ಯ ಹಾಗೂ ಪ್ರಗತಿಬಂಧು ಸ್ವಸಹಾಯ ಒಕ್ಕೂಟಗಳ ಆಶ್ರಯದಲ್ಲಿ 151ನೇ ಗಾಂಧಿ ಜಯಂತಿ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿಸ್ಮತಿ ಪ್ರಯುಕ್ತ ವ್ಯಸನ ಮುಕ್ತರ ಸಮಾವೇಶ ಮತ್ತು ತಾಲೂಕಿನ 151 ಕಡೆ ಏಕಕಾಲದಲ್ಲಿ ಅ. 2 ರಂದು ಶ್ರದ್ದಾಕೇಂದ್ರ ಮತ್ತು ಶಾಲಾ ವಠಾರ ಸ್ವಚ್ಚತೆ ನಡೆಯಲಿದೆ ಎಂದು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಕಳಂಜ ವಿಶ್ವನಾಥ ರೈ ಹೇಳಿದರು. ಅವರು ಸುಳ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.ಸುದ್ದಿಗೋಷ್ಟಿಯಲ್ಲಿ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಎನ್.ಎ.ರಾಮಚಂದ್ರ, ತಾಲೂಕು ಘಟಕದ ಕೋಶಾಧಿಕಾರಿ ಲೋಕನಾಥ್ ಅಮೆಚೂರ್, ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ, ಬೆಳ್ಳಾರೆ ವಲಯಾಧ್ಯಕ್ಷ ಕೂಸಪ್ಪ ಗೌಡ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *