Header Ads
Header Ads
Header Ads
Breaking News

ಅ.22 ರಂದು ಬಂಟ್ವಾಳಕ್ಕೆ ಸಿ‌ಎಂ ಆಗಮನ ವಿವಿಧ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ

ಬಿ.ಸಿ.ರೋಡಿನಲ್ಲಿ ನಿರ್ಮಾಣಗೊಂಡ ವಿವಿಧ ಸರಕಾರಿ ಕಟ್ಟಡಗಳ ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 22 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಕಟ್ಟಡ, ಕುಡಿಯುವ ನೀರಿನ ಯೋಜನೆಗಳ ಲೋಕಾರ್ಪಣೆ ಹಾಗೂ ಇನ್ನಷ್ಟು ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಸ್ವಕ್ಷೇತ್ರದ ಅಭಿವೃದ್ದಿಯ ಕನಸು ನನಸಾಗಲಿದೆ. ಜೊತೆಗೆ ಬಂಟ್ವಾಳ ಜನತೆಯ ಬಹು ವರ್ಷಗಳ ಅಗತ್ಯ ಬೇಡಿಕೆಯೂ ಈಡೇರಲಿದೆ.ವಿವಿಧ ಅಭಿವೃದ್ದಿ ಕಾಮಾಗಾರಿ ಉದ್ಘಾಟನೆಯ ವೇಳೆ ಮುಖ್ಯಮಂತ್ರಿ ಅವರ ಜೊತೆಗೆ ರಾಜ್ಯದ ಪ್ರಮುಖ ಸಚಿವರು ಸಹಿತ ಹಲವು ರಾಜಕಾರಣಿಗಳು ಹಾಗೂ ಗಣ್ಯರು ಬಿ.ಸಿ.ರೋಡಿಗೆ ಬರಲಿದ್ದಾರೆ. ಮುಖ್ಯಮಂತ್ರಿಯವರ ಆಗಮನದ ಹಿನ್ನೆಲೆಯಲ್ಲಿ ಸಚಿವ ರಮಾನಾಥ ರೈ ಅವರು ಈಗಾಗಲೇ ಅಧಿಕಾರಿಗಳ ಜೊತೆ ಹಲವು ಸುತ್ತಿನ ಚರ್ಚೆಯನ್ನು ನಡೆಸಿದ್ದಾರೆ.

ಈ ನಿಟ್ಟಿನಲ್ಲಿ ಸಚಿವ ರಮಾನಾಥ ರೈ ಅವರ ಉಸ್ತುವಾರಿಯಲ್ಲಿಯೇ ಭರದ ಸಿದ್ಧತೆ ನಡೆಯುತ್ತಿದೆ. ನೂತನ ಕೆ‌ಎಸ್ಸಾರ್ಟಿಸಿ ಬಸ್‌ತಂಗುದಾಣದ ಆವರಣದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯನಡೆಯಲಿದೆ. ಒಟ್ಟು 252. 50 ಕೋಟಿ ರುಪಾಯಿಯ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ಮುಖ್ಯುಮಂತ್ರಿ ಬಂಟ್ವಾಳದಲ್ಲಿ ನೆರವೇರಿಸಲಿದ್ದಾರೆ.

ವರದಿ: ಸಂದೀಪ್ ಬಂಟ್ವಾಳ

Related posts

Leave a Reply