Header Ads
Header Ads
Breaking News

ಅ.25ರಂದು ಅತ್ತಾವರದಲ್ಲಿ ’ರಾಯಲ್ ಹೆವನ್ ರೋಸ್’ನ 5ನೇ ಶಾಖೆ ಉದ್ಘಾಟನೆ

ಮಂಗಳೂರು: ನಗರದ ಸೌಂದರ್ಯಪ್ರಿಯರಿಗೊಂದು ಸಿಹಿಸುದ್ದಿ. ಸೌಂದರ್ಯವರ್ಧಕ ಸೇವೆಗಳಿಗಾಗಿ ಪ್ರಖ್ಯಾತಿ ಪಡೆದಿರುವ ಮಂಗಳೂರಿನ ರಾಯಲ್ ಹೆವನ್‌ರೋಸ್‌ನ ಮತ್ತೊಂದು ಶಾಖೆ ಮಂಗಳೂರಿನಲ್ಲಿ ಶುಭಾರಂಭಗೊಳ್ಳುತ್ತಿದೆ. ಅ.25ರಂದು ಸಂಜೆ ನೂತನ ಶಾಖೆಯು ಉದ್ಘಾಟನೆಗೊಳ್ಳಲಿದೆ.ಮಂಗಳೂರಿನ ಅತ್ತಾವರ ಕಾಪ್ರಿಕುಡ್ಡದ ಐವರಿ ಎನ್‌ಕ್ಲೇವ್ ಕಟ್ಟಡದ ಮೊದಲನೇ ಮಹಡಿಯಲ್ಲಿ ಆರಂಭಗೊಳ್ಳಲಿರುವ ನೂತನ ರಾಯಲ್ ಹೆವನ್‌ರೋಸ್‌ನ 5ನೇ ಶಾಖೆಯನ್ನು ರಾಜ್ಯ ನಗರಾಭಿವೃದ್ಧಿ ಮತ್ತು ವಸತಿ ಖಾತೆ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ.

ಅ.25ರಂದು ಸಂಜೆ 4.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಭಾಸ್ಕರ್ ಕೆ., ಮಾಜಿ ಶಾಸಕ ಜೆ.ಆರ್.ಲೋಬೋ, ಮೋತಿಶ್ಯಾಂ ಡೆವಲೆಪರ್‍ಸ್‌ನ ಆಡಳಿತ ನಿರ್ದೇಶಕ ಎಸ್.ಎಂ. ಅರ್ಷದ್, ಖ್ಯಾತ ನಟಿ ಸೋನಲ್ ಮೊಂತೇರೋ, ಶನಕತ್ ಅಲಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.ಈಗಾಗಲೇ ತನ್ನ ಗ್ರಾಹಕಸ್ನೇಹಿ ಸೇವೆಯ ಮೂಲಕ ಮನೆಮಾತಾಗಿರುವ ರಾಯಲ್ ಹೆವನ್ ರೋಸ್ ಯುನಿಸೆಕ್ಸ್ ಸೆಲೂನ್ ಮಂಗಳೂರಿನ ಸಿಟಿಸೆಂಟರ್, ಫೋರಂಫಿಝಾ ಮಾಲ್, ಎಂಪೈರ್ ಮಾಲ್ ಮತ್ತು ಕಂಕನಾಡಿ ಶಾಲಿಮಾರ್ ಕಾಂಪ್ಲೆಕ್ಸ್‌ನಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಇದೀಗ ೫ನೇ ಶಾಖೆಯ ಮೂಲಕ ಗ್ರಾಹಕರಿಗೆ ನಗುಮೊಗದ ಸೇವೆ ನೀಡಲು ಸಂಸ್ಥೆ ಬದ್ಧವಾಗಿದೆ ಎಂದು ರಾಯಲ್ ಹೆವನ್ ರೋಸ್ ಮಾಲಕ ಮುಸ್ತಫಾ ಪ್ರೇಮಿ ತಿಳಿಸಿದ್ದಾರೆ.

Related posts

Leave a Reply