Header Ads
Header Ads
Breaking News

ಅ.25ರಂದು ಯೆನೆಪೋಯದಲ್ಲಿ ಪೌಷ್ಠಿಕಾಂಶದ ಅಧ್ಯಯನ ಕೇಂದ್ರ ಉದ್ಘಾಟನೆ

ದೇರಳಕಟ್ಟೆಯಲ್ಲಿರುವ ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದಲ್ಲಿ ಪೌಷ್ಠಿಕಾಂಶದ ಅಧ್ಯಯನ ಕೇಂದ್ರವು ಅಕ್ಟೋಬರ್ ೨೫ರಂದು ಉದ್ಘಾಟನೆಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಡಾ. ಅನುರಾಗ್ ಭಾರ್ಗವ ತಿಳಿಸಿದರು.ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಭಾರತವು ಪೌಷ್ಠಿಕಾಂಶದ ಸಮಸ್ಯೆಯ ಇಬ್ಬಗೆಯ ಹೊರೆಯನನು ಎದುರಿಸುತ್ತಿದೆ. ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದ ಸೋಂಕು ಹಾಗೂ ಸಾವುಗಳು ಸಂಭವಿಸುತ್ತವೆ.

ಇದಕ್ಕಾಗಿಯೇ ಯೇನೆಪೋಯ ವೈದ್ಯಕೀಯ ಕಾಲೇಜು ಭೋಧಕವರ್ಗ ಹಲವಾರು ವರ್ಷಗಳಿಂದ ಪೌಷ್ಠಿಕಾಂಶದ ವಿಷಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಯೆನೆಪೋಯ ಪರಿಗಣಿಲ್ಪಟ್ಟ ವಿಶ್ವವಿದ್ಯಾನಿಲಯವು ಕ್ಷಯ ರೋಗಿಗಳಿಗೆ ಪೌಷ್ಠಿಕಾಂಶದ ಬೆಂಬಲವನ್ನು ನೀಡಲು ರಾಷ್ಟ್ರೀಯ ನೀತಿಯ ದಾಖಲೆಯನ್ನು ರಚಿಸುವಲ್ಲಿ ಪಾತ್ರವಹಿಸಿದೆ ಎಂದು ಹೇಳಿದರು.ಆನಂತರ ಯೆನೆಪೋಯ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ. ಪ್ರಭಾ ಅಧಿಕಾರಿ ಅವರು, ಯೆನೆಪೋಯದಲ್ಲಿ ಪೌಷ್ಠಿಕಾಂಶದ ಅಧ್ಯಯನ ಕೇಂದ್ರದ ರಚನೆಯಾಗುತ್ತಿದೆ.

ಈ ಕೆಲಸದಲ್ಲಿ ಅಧ್ಯಯನ ಮಾಡುವ ಭಾರತದ ವೈದ್ಯಕೀಯ ಕಾಲೇಜುಗಳಲ್ಲಿನ, ಕೆಲವು ಕೇಂದ್ರಗಳಲ್ಲಿ ಒಂದಾಗಲಿದೆ, ಈ ಕೇಂದ್ರ ಎಲ್ಲಾ ವಯಸ್ಸಿನ ರೋಗಿಗಳ ಪೌಷ್ಠಿಕಾಂಶದ ಹಾಗೂ ಆರೋಗ್ಯ ಸಮಸ್ಯೆಗಳ ಕುರಿತಾಗಿ ಹೆಚ್ಚಿನ ಅಧ್ಯಯನವನ್ನು ಕೈಗೊಳ್ಳಲಿದೆ. ಈ ಪೌಷ್ಠಿಕಾಂಶದ ಅಧ್ಯಯನ ಕೇಂದ್ರವಿ ಅಕ್ಟೋಬರ್ ೨೫ರಂದು ಮಧ್ಯಾಹ್ನ 2.30ಕ್ಕೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಮಾಜಿ ನಿರ್ದೇಶಕ ಜನರಲ್ ಡಾ. ವಿಶ್ವ ಮೋಹನ್ ಕ್ಯಾಟೋಚ್ ಮತ್ತು ಯೆನೆಪೋಯ ಅಬ್ದುಲ್ಲಾ ಕುಂಞಿ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಪೌಷ್ಠಿಕಾಂಶದ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಡಾ. ಮಾಧವಿ ಭಾರ್ಗವ ಉಪಸ್ಥಿತರಿದ್ದರು.

Related posts

Leave a Reply