Header Ads
Header Ads
Breaking News

ಆಂಧ್ರದ ಅಕ್ರಮ ಹಣ ವರ್ಗಾವಣೆ ಪ್ರಕರಣ, ನಿಮ್ಮಗದ್ದರ ಆಸ್ತಿ ಮುಟ್ಟುಗೋಲು

ವೈ‌ಎಸ್‌ಆರ್ ಕಾಂಗ್ರೆಸ್ ಮುಖಂಡ ಜಗನ್ ಮೋಹನ್ ರೆಡ್ಡಿ ಹಾಗೂ ಇತರರ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ರೂ. ೧೪೮ ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿದೆ.
ಜಗನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನಿಮ್ಮಗದ್ದ ಪ್ರಸಾದ್ ಅವರ ಆಂಧ್ರಪ್ರದೇಶದಲ್ಲಿನ ಕಂಪೆನಿಗಳ ಭೂಮಿಯನ್ನು ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ. ಈ ಭೂಮಿ ರೂ. ೧೪೮.೮೯ ಕೋಟಿ ಮೌಲ್ಯದ್ದಾಗಿದೆ. ಜಗನ್ ಹಾಗೂ ಇತರರ ವಿರುದ್ಧ ಸಿಬಿ‌ಐ ದಾಖಲಿಸಿಕೊಂಡಿದ್ದ ಎಫ್‌ಐ‌ಆರ್ ಆಧಾರದಲ್ಲಿ ಜಾರಿ ನಿರ್ದೇಶನಾಲಯವು ಪ್ರಕರಣದ ತನಿಖೆ ನಡೆಸಿತ್ತು.

Related posts

Leave a Reply