Header Ads
Breaking News

ಆಂಧ್ರಪ್ರದೇಶದಲ್ಲಿ ನಡೆದ ಲಾರಿ ಅಪಘಾತ : ಉಳ್ಳಾಲದ ಓರ್ವ ಯುವಕ ಸಾವು, ಇಬ್ಬರಿಗೆ ಗಾಯ

ಉಳ್ಳಾಲ: ಆಂಧ್ರ ಪ್ರದೇಶದಲ್ಲಿ ನಡೆದ ಲಾರಿ ಅಪಘಾತದಲ್ಲಿ ಉಳ್ಳಾಲ ಮೂಲದ ಓರ್ವ ಮೃತಪಟ್ಟರೆ ಓರ್ವ ಗಂಭೀರ ಗಾಯಗೊಂಡಿದ್ದು, ಇನ್ಬೊರ್ವ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.

ಲಾರಿಯಲ್ಲಿದ್ದ ಹರೇಕಳ ಐಕು ನಿವಾಸಿ ಮಹಮ್ಮದ್ ರವೂಫ್ (22) ಸ್ಥಳದಲ್ಲೇ ಸಾವನ್ನಪ್ಪಿದ್ದು, ಪಾವೂರು ಹರೇಕಳ ನಿವಾಸಿ ಶಾಕಿರ್ ಗಂಭೀರ ಗಾಯಗೊಂಡರೆ, ನಾಟೆಕಲ್ ಮೂಲದ ಯುವಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.ಒರಿಸ್ಸಾದಿಂದ ಮಂಗಳೂರು ಕಡೆ ಮೀನು ಸಾಗಾಟ ಮಾಡುತ್ತಿದ್ದ ಲಾರಿ ಆಂಧ್ರ ಪ್ರದೇಶದಲ್ಲಿ ಬುಧವಾರ ತಡ ರಾತ್ರಿ ಅಪಘಾತಕ್ಕೀಡಾಗಿದೆ. ಮಂಗಳೂರು ಮಾರುಕಟ್ಟೆಗೆ ಮೀನು ತರುವ ಮೀನಿನ ಲಾರಿ ಬುಧವಾರ ಬೆಳಗ್ಗೆ ಒರಿಸ್ಸಾ ಮೀನುಗಾರಿಕಾ ಬಂದರಿನಿಂದ ಹೊರಟಿದ್ದು ಸುಮಾರು 450 ಕಿ. ಮೀ. ಸಂಚಾರ ನಡೆಸಿ ಆಂಧ್ರ ಮಾರ್ಗವಾಗಿ ಮಂಗಳೂರು ಕಡೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಶುಕ್ರವಾರ ಈ ಲಾರಿ ಮಂಗಳೂರು ಮಾರುಕಟ್ಟೆಗೆ ತಲುಪಬೇಕಿತ್ತು. ಮೃತ ರವೂಫ್ ಸಂಬಂಧಿಕರು ಬೆಂಗಳೂರಿಗೆ ತೆರಳಿದ್ದು ಆಂದ್ರ ಪ್ರದೇಶದಿಂದ ಬೆಂಗಳೂರುಮಾರ್ಗವಾಗಿ ಮೃತದೇಹವನ್ಬು ಮಮನಗಳೂರಿಗೆ ತರಲಿದ್ದು ಶುಕ್ರವಾರ ಮೃತದೇಹ ಹರೇಕಳ ತಲುಪಲಿದೆ.

Related posts

Leave a Reply

Your email address will not be published. Required fields are marked *