Header Ads
Header Ads
Header Ads
Breaking News

ಆಂಬ್ಯುಲೆನ್ಸ್ ವಾಹನಕ್ಕೆ ಚಾಲನೆ ವಿಟ್ಲ ಡಿ ಗ್ರೂಪ್ ವತಿಯಿಂದ ಉಚಿತ ಸೇವೆ

ವಿಟ್ಲ: ವಿಟ್ಲದ “ಡಿ ಗ್ರೂಪ್” ವತಿಯಿಂದ ಉಚಿತ ಸೇವೆಯ ಆಂಬ್ಯುಲೆನ್ಸ್ ವಾಹನವನ್ನು ವಿಟ್ಲದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಎಸ್‌ಡಿಪಿ‌ಐ ಜಿಲ್ಲಾಧ್ಯಕ್ಷ ಹನೀಫ್‌ಖಾನ್ ಕೊಡಾಜೆ ಅವರು ಆಂಬ್ಯುಲೆನ್ಸ್ ಸೇವೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ನಿಸ್ವಾರ್ಥ ಸೇವೆಗಳು ಸಮಾಜದಲ್ಲಿ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಡಿ ಗ್ರೂಪ್ ಸಮಾಜ ಸೇವೆಗಾಗಿ ಲಕ್ಷಾಂತರ ರೂ. ವೆಚ್ಚದಲ್ಲಿ ಆಂಬ್ಯುಲೆನ್ಸ್ ಸೇವೆಯನ್ನು ಸಮಾಜಕ್ಕೆ ಅರ್ಪಣೆ ಮಾಡಿದ ಕಾರ್ಯ ಶ್ಲಾಘನೀಯವಾಗಿದೆ. ಸಮುದಾಯಕ್ಕಾಗಿ ಯಾರು ಸವಲತ್ತುಗಳನ್ನು ಮಾಡಿಕೊಡಬೇಕಾಗಿತ್ತೋ ಅವರು ನಿರ್ಲಕ್ಷ್ಯ ಮಾಡಿ ಮಾಡಿಕೊಡದೆ ಇದ್ದಾಗ, ನಮ್ಮ ಯುವಕರೇ ಸ್ವತಹ ಉತ್ಸುಕತೆಯಿಂದ ಮಾಡಿದ ಇಂತಹ ಉಚಿತ ಆಂಬ್ಯುಲೆನ್ಸ್ ಸೇವೆಯು ಎಲ್ಲಾ ಊರಿನವರಿಗೂ ಮಾದರಿಯಾಗಿದೆ ಎಂದು ಹೇಳಿದರು.

ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಶಾಂತ್, ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬು ಅಬ್ದುಸ್ಸಲಾಂ ಲತೀಫಿ, ಎಸ್‌ಡಿಪಿ‌ಐ ಜಿಲ್ಲಾ ಸಮಿತಿ ಸದಸ್ಯ ಖಲಂದರ್ ಪರ್ತಿಪ್ಪಾಡಿ ,ದ.ಕ.ಜಿಲ್ಲಾ ಯುವ ಕಾಂಗ್ರೆಸ್‌ನ ಲುಕ್ಮಾನ್ ಬಂಟ್ವಾಳ, ಯುಟಿ ತೌಸೀಫ್ ಪುತ್ತೂರು, ಇಬ್ರಾಹಿಂ ಏರ್ ಸೌಂಡ್ಸ್, ಇಬ್ರಾಹಿಂ ಹಾಜಿ ಪೊನ್ನೋಟ್ಟು, ಹೊರೈಝನ್ ಪಬ್ಲಿಕ್ ಸ್ಕೂಲ್‌ನ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಡಿ ಗ್ರೂಪ್‌ನ ಅಧ್ಯಕ್ಷ ವಿ.ಕೆ.ಎಂ.ಹಂಝ, ವಿ.ಕೆ.ಎಂ.ಅಬೂಸ್ವಾಲಿ, ಮಂಗಳೂರು ಬ್ಲಡ್ ಡೋನರ್ಸ್‌ನ ಅಧ್ಯಕ್ಷ ಸಿದ್ದೀಖ್ ಮಂಜೇಶ್ವರ, ಡಿ ಗ್ರೂಪ್‌ನ ಶಾಹಿದ್ ಮೇಗಿನಪೇಟೆ, ಇಸಾಕ್ ಪೊನ್ನೋಟ್ಟು,ಬೆಂಗಳೂರು ಹೈಕೋರ್ಟ್‌ನ ನ್ಯಾಯವಾದಿ ಅನ್ಸಾರ್ ವಿಟ್ಲ, ನೌಫಲ್ ಕುಡ್ತಮುಗೇರು, ಹಂಝ ಮೇಗಿನಪೇಟೆ ಹಾಗೂ ವಿ.ಎಚ್ ರಿಯಾಝ್ ಮೊದಲಾದವರು ಉಪಸ್ಥಿತರಿದ್ದರು.
ವರದಿ: ಮಹಮ್ಮದ್ ಆಲಿ ವಿಟ್ಲ

Related posts

Leave a Reply