Header Ads
Breaking News

ಆಕಸ್ಮಿಕ ಬೆಂಕಿ ತಗುಲಿ ಮನೆ ಭಸ್ಮ : ಎರಡು ಲಕ್ಷಕ್ಕೂ ಅಧಿಕ ನಷ್ಟ

ಕಾರ್ಕಳ : ಪುರಸಭೆ ವ್ಯಾಪ್ತಿಯ ಗಾಂಧಿ ಮೈದಾನ ನಿರ್ಮಾಲಾ ಮರದ ಮಿಲ್ಲು ಬಳಿ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮನೆಯ ಮಹಡಿ ಸಂಪೂರ್ಣ ಭಸ್ಮಗೊಂಡಿದ್ದು ಎರಡು ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ.ಸುಲೋಚನಾ ರಾವ್ , ಪ್ರಕಾಶ್ ರಾವ್ ಹಾಗೂ ಪಕ್ಕದ ಮನೆಯ ಗಿರಿಜಾ ಎಂಬುವರು ಎರಡು ಕುಟುಂಬಗಳು ವಾಸವಿದ್ದ ಮನೆಗೆ ಸೋಮವಾರ ರಾತ್ರಿ 7 ಗಂಟೆಗೆ ಇದ್ದಕ್ಕಿದ್ದಂತೆ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಸ್ಥಳೀಯರು ಮಾಹಿತಿ ನೀಡಿದ್ದು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.ಬೆಂಕಿ ತಗುಲಿದ ಕೋಡಲೇ ಮನೆಯವರ ಸಮಯ ಪ್ರಜ್ಞೆ ಯಿಂದ ಮನೆಯ ಪಕ್ಕದ ದನದ ಕೊಠಡಿಗೆಯಲ್ಲಿದ್ದ ದನ ಹಾಗೂ ಕರು ಗಳನ್ನು ರಕ್ಷಿಸಿ ಕೂಡಲೇ ಬೇರೆ ಕಡೆಗೆ ವರ್ಗಾಯಿಸಿದ್ದಾರೆ.

100 ವರ್ಷಗಳ ಕಾಲದ ಹಳೆಯ ಮನೆ ಇದಾಗಿದ್ದು. ಈ ಹಿಂದೆ ಹುಲ್ಲಿನ ಮನೆಯಾಗಿತ್ತು. ಬಳಿಕ ಅದನ್ನು ತೆಗೆದು ರಬ್ಬರ್ ಶೀಟ್‍ನಿಂದ ಮಹಡಿ ನಿರ್ಮಾಣ ಮಾಡಲಾಗಿದೆ. ರಬ್ಬರ್ ಅದ ಕಾರಣ ಬೆಂಕಿ ತಗುಲಿದ ಕ್ಷಣ ಮಾತ್ರದಲ್ಲಿ ದಗ ದಗನೇ ಬೆಂಕಿಮನೆಯಮಹಡಿಯನ್ನು ಅವೃತಿಸಿದೆ. ಬೆಂಕಿ ತೀವೃತೆಗೆ ಮನೆಯಲ್ಲಿದ್ದ ದಿನಬಳಕೆ ವಸ್ತುಗಳು ಸುಟ್ಟು ಕರಕಲಾಗಿದೆ.ಅಲ್ಲದೆ ಮನೆಯೊಳಗೆ ಇದ್ದ ಮೂರು ಗ್ಯಾಸ್ ಸಿಲಿಂಡರ್ ಅನ್ನು ಅಗ್ನಿಶಾಮಕ ಸಿಬ್ಬಂದಿಯ ಸಮಯ ಪ್ರಜ್ಞೆ ಯಿಂದ ಕೂಡಲೇ ಅದನ್ನು ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ ಜತೆಗೆ ಜಾಸ್ತಿ ಅನಾಹುತ ತಪ್ಪಿಸಿದ್ದಾರೆ.ಕಾರ್ಯಚರಣೆ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಬಿ ಎಮ್ ಸಂಜೀವ್ , ಅಚ್ವುತಾ ಕರ್ಕೆರಾ, ಜಯ ಮೂಲ್ಯ,ಸುರೇಶ್ ಕುಮಾರ್ ಹಾಸನ್ ಮುಲ್ತಾನಿ, ಸುಜಯ್, ಮಹೇಶ್ ಶಂಕರ್ ಸಿಬ್ಬಂದಿ ಗಳು ಭಾಗವಹಿಸದ್ದಾರೆ.

Related posts

Leave a Reply

Your email address will not be published. Required fields are marked *