Header Ads
Breaking News

ಆಕಾಶ್ ಇನ್ಸ್ಟಿಟ್ಯೂಟ್ ಆಪ್ ಪ್ಯಾನ್ ಇಂಡಿಯಾ ಸಮೂಹ ಸಂಸ್ಥೆ : 2021ನೇ ಬ್ಯಾಚ್‍ನ ನೀಟ್ ಅರ್ಹತಾ ಪರೀಕ್ಷೆಗೆ ಪ್ರವೇಶಾತಿ ಆರಂಭ

ಮಂಗಳೂರಿನಲ್ಲಿರುವ ಆಕಾಶ್ ಇನ್ಸ್ಟಿಟ್ಯೂಟ್ ಆಪ್ ಪ್ಯಾನ್ ಇಂಡಿಯಾ ಸಮೂಹ ಸಂಸ್ಥೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಕೋಚಿಂಗ್ ನೀಡುವ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಬಾರಿ ಸಂಸ್ಥೆಯಲ್ಲಿ ಪ್ರವೇಶ ಪಡೆದ ಎಲ್ಲಾ ವಿದ್ಯಾರ್ಥಿಗಳು ರ್‍ಯಾಂಕ್‌  ಪಡೆದು ಉತ್ತೀರ್ಣರಾಗಿರುವುದು ಹೆಮ್ಮೆಯ ವಿಚಾರ

ಮಂಗಳೂರಿನ ಕೆ.ಎಸ್.ರಾವ್ ರಸ್ತೆಯ ಎಕ್ಸೆಲ್ ಮಿಸ್ಚಿಪ್ ಮಾಲ್‍ನಲ್ಲಿರುವ ಆಕಾಶ್ ಇನ್ಸ್ಟಿಟ್ಯೂಟ್ ಪ್ಯಾನ್ ಇಂಡಿಯಾ ಕೋಚಿಂಗ್ ಸಂಸ್ಥೆ ನೀಟ್ ಜೆಇಇ ಮತ್ತು ಕೆಸಿಇಟಿ ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಕೋಚಿಂಗ್ ನೀಡುವ ಸಂಸ್ಥೆಯಾಗಿದೆ. ಈ ಸಂಸ್ಥೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪ್ರವೇಶ ತರಬೇತಿಯಲ್ಲಿ 31 ವರ್ಷಗಳ ಅನುಭವವನ್ನು ಹೊಂದಿದ್ದು ಭಾರತದಾದ್ಯಂತ 230 ಶಾಖೆಗಳನ್ನು ಹೊಂದಿದೆ. ಈ ಸಂಸ್ಥೆಯು ಜೆಇಇ ಅಡ್ವಾನ್ಸ್ಡ್ ಮತ್ತು 2020ರಲ್ಲಿ ನಡೆದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಒಂದನೇ ರ್ಯಾಂಕ್‍ನ್ನು ಪಡೆದುಕೊಂಡಿದ್ದು ಸಂಸ್ಥೆಯಲ್ಲಿ ಸಂಭ್ರಮಾಚರಣೆ ಮಾಡಿದರು. ಆಕಾಶ್ ಇನ್ಸ್ಟಿಟ್ಯೂಟ್ ಸಂಸ್ಥೆಯಲ್ಲಿ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭದಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಆಕಾಶ್ ಇನ್ಸಿಸ್ಟಿಟ್ಯೂಟ್ ಸಂಸ್ಥೆಗೆ ಅಭಿನಂದನೆ ಸಲ್ಲಿಸಿ ಈ ಸಂಸ್ಥೆಯು ರ್‍ಯಾಂಕ್‌ ಗಳಿಸುವಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡುವಲ್ಲಿ ಸಹಕರಿಸಿದ್ದಾರೆ. ಈ ಸಂಸ್ಥೆಯ ಬೆಂಬಲದಿಂದ ಉನ್ನತ  ರ್‍ಯಾಂಕ್‌  ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.ಇನ್ನು ನೀಟ್ ಪರೀಕ್ಷೆಯಲ್ಲಿ ಲೆರಾಯ್ ಡಿಸೋಜ ಅವರು 681/720 ಅಂಕಗಳನ್ನು ಗಳಿಸಿ ಮಂಗಳೂರಿಗೆ ಟಾಪರ್ ಆಗಿದ್ದಾರೆ. 588ನೇ ಸ್ಥಾನವನ್ನು ಪಡೆದು ಆಲ್ ಇಂಡಿಯಾ ರ್‍ಯಾಂಕ್‌  ಗಳಿಸಿದ್ದಾರೆ.

ಇನ್ನುಳಿದಂತೆ ಕ್ಲೆವೆನ್ ಆಶ್ಲೆ ಡಿಸೋಜ 644, ಚೈತ್ರಾ ಶೇಟ್ ಸಿ.630, ವೈಷ್ಣವಿ ಜಗದೀಶ್ ನಾಯಕ್ 628, ಸೌರಭ್ ಎನ್ ಶೆಟ್ಟಿ 607, ಪಡೆದರೆ ಜೆಇಇ ಅರ್ಹತಾ ಪರೀಕ್ಷೆಯಲ್ಲಿ ಹರಿಕೃಷ್ಣ ಎ.ಎಸ್., ಪ್ರಜ್ವಲ್ ನಾಯಕ್, ಶ್ರೀ ರಾಮ್ ಕೆ.ಪಿ. ಕೆಸಿಇಟಿ ಅರ್ಹತಾ ಪರೀಕ್ಷೆಯಲ್ಲಿ ರೋಲಿನ್ ಫರ್ನಾಂಡೀಸ್ 102 ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

ಆಕಾಶ್ ಇನ್ಸ್ಟಿಟ್ಯೂಟ್ ಒಂದನೇ ವರ್ಷದಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ನೀಟ್ ಮತ್ತು ಜೆಇಇ ಗೆ ಅರ್ಹತೆಯನ್ನು ಪಡೆದಿದ್ದರು. ಇನ್ನೊಂದು ಮಹತ್ವದ ವಿಚಾರ ಎಂದರೆ ಆಕಾಶ್ ಇನ್ಸ್ಟಿಟ್ಯೂಟ್ ಸಂಸ್ಥೆ ಇದೇ ಮೊದಲ ಬಾರಿಗೆ ಅನ್‍ಲೈನ್ ಮತ್ತು ಆಪ್ ಲೈನ್ ಅಧ್ಯಯನದ ಸಂಯೋಜನೆಯನ್ನು ಮಾಡಿದ್ದು. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕೊಚಿಂಗ್ ನೀಡಲಿದ್ದಾರೆ. ಇದೀಗ 2021 ನೇ ನೀಟ್ ಪ್ರವೇಶ ಪರೀಕ್ಷೆಗೆ ಪ್ರವೇಶಾತಿ ಆರಂಭಗೊಂಡಿದ್ದು ಆಸಕ್ತ ವಿದ್ಯಾರ್ಥಿಗಳು ಪ್ರವೇಶಾತಿಯನ್ನು ಪಡೆದುಕೊಳ್ಳಬಹುದು.

Related posts

Leave a Reply

Your email address will not be published. Required fields are marked *