
ಆಗಸದಲ್ಲಿ ಶತಮಾನದ ಕೌತುಕ ನಡೆದಿದೆ. ಗುರು ಗ್ರಹ ಮತ್ತು ಶನಿ ಗ್ರಹ ಸಮಾಗಮ ಆಗಿದೆ. ಈ ವಿದ್ಯಾಮಾನವನ್ನು ಉಡುಪಿಯಲ್ಲಿ ನೂರಾರು ಜನ ಕಣ್ತುಂಬಿಕೊಂಡಿದ್ದಾರೆ. ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಮೂರು ಟೆಲಿಸ್ಕೋಪ್ ಮೂಲಕ ಖಗೋಳ ವೀಕ್ಷಣಾ ಆಸಕ್ತರಿಗೆ ಗುರು ಶನಿಯ ಸಮಾಗಮವನ್ನು ಹತ್ತಿರದಿಂದ ನೋಡುವ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದರು. ಖಗೋಳ ಶಾಸ್ತ್ರಜ್ಞ ಡಾ.ಎ. ಪಿ ಭಟ್ ಸಂಪೂರ್ಣ ವಿವರಣೆಯನ್ನು ನೀಡಿದರು. ಗುರು ಶನಿಯ ಸಮಾಗಮದ ಜೊತೆಗೆ ಚಂದ್ರ ನಕ್ಷತ್ರಪುಂಜಗಳ ಬಗ್ಗೆ ಈ ಸಂದರ್ಭದಲ್ಲಿ ಮಾಹಿತಿ ನೀಡಲಾಯ್ತು.