Header Ads
Header Ads
Breaking News

ಆಗಸ್ಟ್ 18ರಂದು ಉಚಿತ ಹಿಜಾಮಾ ಚಿಕಿತ್ಸಾ ಶಿಬಿರ

ಗೋಳ್ತಮಜಲು ಹಜಾಜ್ ಸ್ಪೋರ್ಟ್ಸ್ ಕ್ಲಬ್ (ರಿ) ವತಿಯಿಂದ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯ ಆಯುಷ್ ವಿಭಾಗದ ಸಹಯೋಗದಲ್ಲಿ ಉಚಿತ ಹಿಜಾಮಾ ಚಿಕಿತ್ಸಾ ಶಿಬಿರವು ಆಗಸ್ಟ್ 18ರಂದು ಗೋಳ್ತಮಜಲಿನ ಹಜಾಜ್ ಸ್ಪೋರ್ಟ್ಸ್ ಕ್ಲಬ್ ಕಚೇರಿಯಲ್ಲಿ ನಡೆಯಲಿದೆ ಎಂದು ಹಜಾಜ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷರಾದ ಇಂತಿಯಾಝ್ ಹೇಳಿದ್ರು.
ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, ಸಬಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕರಾದ ಯು. ರಾಜೇಶ್ ನಾಯ್ಕ್ ವಹಿಸಲಿದ್ದು, ಮಾಜಿ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದ್ರು.
ಈ ಸಂದರ್ಭ ಹಜಾಜ್ ಸ್ಪೋರ್ಟ್ಸ್ ಕ್ಲಬ್‌ನ ಗೌರವಾಧ್ಯಕ್ಷರಾದ ಹಾಜಿ. ಜಿ. ಮುಹಮ್ಮದ್ ಹನೀಫ್, ಕಾರ್ಯಕಾರಿ ಸಮಿತಿ ಸದಸ್ಯ ಸಲೀಂ ಮೊಬೈಲ್ ಕೇರ್, ಹಾರಿಸ್ ಅಮರ್, ಜಮಾಲ್ ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *