Header Ads
Header Ads
Header Ads
Breaking News

ಆಟದ ಮೈದಾನ ಈಜುಕೊಳವನ್ನಾಗಿ ಪರಿವರ್ತಿಸುವುದಕ್ಕೆ ವಿರೋಧ ಎಮ್ಮೆಕೆರೆ ಮೈದಾನ ಉಳಿಸಿ ಹೋರಾಟ ಸಮಿತಿಯಿಂದ ಪ್ರತಿಭಟನೆ

ಇತಿಹಾಸ ಪ್ರಸಿದ್ಧ ಎಮ್ಮೆಕೆರೆ ಮೈದಾನವನ್ನು ಈಜುಕೊಳವನ್ನಾಗಿ ಪರಿವರ್ತಿಸುವುದನ್ನು ವಿರೋಧಿಸಿ ಸೆ.3ರಂದು ಮೈದಾನದಲ್ಲಿ ಸಾರ್ವಜನಿಕರ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಹೋರಾಟ ಸಮಿತಿಯ ಮುಖಂಡ ದಿನಕರ್ ಶೆಟ್ಟಿ ಹೇಳಿದರು.

ಈ ಕುರಿತು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 40 ವರ್ಷಗಳಿಂದ ಸದ್ರಿ ಮೈದಾನದಲ್ಲಿ ಸಮಾಜದ ವಿವಿಧ ಬಾಂಧವರು, ಕ್ರಿಕೆಟ್ ಟೀಮ್‌ಗಳು ಈ ಮೈದಾನವನ್ನು ಅವಲಂಬಿಸಿಕೊಳ್ಳುತ್ತಿದ್ದಾರೆ, ಇದು ಅಲ್ಲದೇ ಮೈದಾನದ ಬದಿಯಲ್ಲಿ ಇತಿಹಾಸ ಪ್ರಸಿದ್ಧ ಕೆರೆಯನ್ನ ಕೂಡ ಮುಚ್ಚುವ ಹುನ್ನಾರ ನಡೆದಿದೆ. ಕೆರೆಗಳನ್ನ ರಕ್ಷಿಸಬೇಕೇ ಹೊರತು ಅದನ್ನು ಮುಚ್ಚಿ ಈಜುಕೊಳ ನಿರ್ಮಿಸುವುದು ವಿಷಾದನೀಯ ಎಂದು ಹೇಳಿದರು.ಏಕಾ‌ಏಕಿ ಟೆಂಡರ್ ಪ್ರತಿಕ್ರಿಯೆ ನಡೆದಿದ್ದು, ದೊಡ್ಡಮಟ್ಟಿನ ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಸೆ.3ರಂದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.

ವರದಿ: ನಾಗೇಶ್ ಕಾವೂರು

Related posts

Leave a Reply