Header Ads
Header Ads
Breaking News

ಆಟವಾಡುತ್ತಿದ್ದ ಮಗು ಕೆರೆಗೆ ಬಿದ್ದು ಸಾವು ಪುತ್ತೂರಿನ ಬಲ್ನಾಡಿನಲ್ಲಿ ನಡೆದ ಘಟನೆ

 

ಆಟವಾಡುತ್ತಿದ್ದ ಮಗುವೊಂದು ಆಕಸ್ಮಿಕವಾಗಿ ಮನೆಯ ತೋಟದಲ್ಲಿರುವ ಕೆರೆಯಲ್ಲಿ ಬಿದ್ದ ಘಟನೆ ಬಲ್ನಾಡು ನಡುಮನೆಯಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸುದರ್ಶನ್ ಮತ್ತು ಅಶ್ವಿನಿ ದಂಪತಿ ಪುತ್ರ ಎರಡು ವರ್ಷದ ಶೌರ್ಯ ಮೃತಪಟ್ಟ ಮಗು. ತನ್ನ ತಾಯಿ ಮನೆ ಬಲ್ನಾಡುಗೆ ರಜಾ ದಿನದಂದು ಬಂದಿದ್ದ ಅಶ್ವಿನಿಯವರು ಪುತ್ರ ಶೌರ್ಯ ನನ್ನು ಅಜ್ಜ ಅಜ್ಜಿಯೊಂದಿಗೆ ಬಿಟ್ಟು ಹೋಗಿದ್ದರು.

ಮೊಮ್ಮಗ ಶೌರ್ಯನನ್ನು ಬೊಜರಾಜ ಅವರು ತೋಟಕ್ಕೆ ಕರೆದೊಯ್ದರು. ಬಳಿಕ ಮನೆಯಲ್ಲಿ ಬಿಟ್ಟು ತಾನು ತೋಟಕ್ಕೆ ಹೋದರು. ಈ ನಡುವೆ ಮೊಮ್ಮಗ ಶೌರ್ಯ ಅಜ್ಜನನ್ನು ಹಿಂಬಾಲಿಸಿ ಹೋಗಿರಬಹುದು ಎನ್ನಲಾಗಿದ್ದು. ಈ ವೇಳೆ ಆತ ಕೆರೆಗೆ ಆಕಸ್ಮಿಕವಾಗಿ ಬಿದ್ದಿರಬಹುದು ಎನ್ನಲಾಗಿದೆ. ಘಟನೆಯ ಕುರಿತು ಬೋಜರಾಜ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts