Header Ads
Header Ads
Breaking News

ಆಟಿ ಅಮಾವಾಸ್ಯೆಯ ಹಾಲೆ ಕಷಾಯ ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆಯಲ್ಲಿ ವಿತರಣೆ ಜುಲೈ 23ರಂದು ಸಾಹಿತ್ಯ ಕೇಂದ್ರದಲ್ಲೂ ವಿತರಣೆ

ಆಂಕರ್ : ಮಂಗಳೂರಿನ ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆ ಹಾಗೂ ಸಾವಯವ ಕೃಷಿಕ ಮತ್ತು ಗ್ರಾಹಕ ಬಳಗ ವತಿಯಿಂದ ಆಟಿ ಅಮಾವ್ಯಾಸೆ ಪ್ರಯುಕ್ತ “ಹಾಲೆ ಕಷಾಯ” ವಿತರಣಾ ಕಾರ್ಯಕ್ರಮವು ರವಿವಾರ ನಗರದ ಸಾಹಿತ್ಯ ಕೇಂದ್ರ ಹಾಗೂ ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆಯಲ್ಲಿ ನಡೆಯಲಿದೆ ಎಂದು ಆಸ್ಪತ್ರೆಯ ಎಂ.ಡಿ ವೈದ್ಯರಾದ ಸಚಿನ್ ನಡ್ಕ ಹೇಳಿದ್ರು.

ಈ ಕುರಿತು ವಿ೪ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ಪ್ರತಿ ವರುಷ ಕೂಡ ಹಾಲೆ ಕಷಾಯವನ್ನು ವಿತರಣೆ ಮಾಡಲಾಗುತ್ತಿದೆ. ಈ ಬಾರಿ ಕೂಡ ವಿತರಣೆ ಮಾಡಲಾಗುತ್ತಿದೆ. ನಗರದ ಸಾಹಿತ್ಯ ಕೇಂದ್ರದಲ್ಲಿ ನಾಳೆ ಮುಂಜಾನೆ 6:30ಕ್ಕೆ ನಡೆಯಲಿರುವ “ಹಾಲೆ ಕಷಾಯ ವಿತರಣಾ ಕಾರ್ಯಕ್ರಮವನ್ನು ಮೇಯರ್ ಕವಿತಾ ಸನಿಲ್ ಉದ್ಘಾಟನೆ ಮಾಡಲಿದ್ದಾರೆ. ಇನ್ನೂ ಮಂಗಳೂರಿನ ವೆಲೆನ್ಸಿಯಾ ಪಿ.ಎಫ್ ಕಚೇರಿ ಸಮೀಪದಲ್ಲಿರುವ ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆಯಲ್ಲೂ 6:30ಕ್ಕೆ ಹಾಲೆ ಕಷಾಯವನ್ನು ವಿತರಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ವರದಿ: ನಾಗೇಶ್ ಕಾವೂರು ಮಂಗಳೂರು

Related posts

Leave a Reply