Header Ads
Header Ads
Breaking News

ಆಡಳಿತಕ್ಕೆ ತಂದರೆ ಕೇಂದ್ರದ ಅಮೃತಾ ಯೋಜನೆ ಅನುಷ್ಠಾನ

ಮೂಡುಬಿದಿರೆ ಪುರಸಭೆಯ 23 ವಾರ್ಡ್‌ಗಳಲ್ಲೂ ಬಿಜೆಪಿ ಸದಸ್ಯರು ಗೆಲ್ಲುವ ಮೂಲಕ ಪುರಸಭೆಯಲ್ಲಿ ಬಿಜೆಪಿ ಆಡಳಿತಕ್ಕೆ ಬರುವಂತ್ತಾಗಬೇಕು ಈ ಬಗ್ಗೆ ಕಾರ್ಯಕರ್ತರು ಶ್ರಮಿಸಬೇಕಾಗಿದೆ. ಪುರಸಭೆಯು ಬಿಜೆಪಿ ತೆಕ್ಕೆಗೆ ಬಂದರೆ ಕೇಂದ್ರ ಸರಕಾರದ ಮಹತ್ವದ ಯೋಜನೆಯಾಗಿರುವ “ಅಮೃತಾ ಯೋಜನೆ”ಯನ್ನು ಅನುಷ್ಠಾನಗೊಳಿಸುವ ಮೂಲಕ ಸಮಗ್ರ ಅಭಿವೃದ್ಧಿಯನ್ನು ಮಾಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆಯನ್ನು ನೀಡಿದರು.

 

ಅವರು ಕಲ್ಲಬೆಟ್ಟು ಅಕ್ಷಯಧಾಮ ಸಭಾಂಗಣದಲ್ಲಿ ಭಾರತೀಯ ಜನತಾ ಪಾರ್ಟಿಯ ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ಆಯೋಜಿಸಿದ್ದ ಕಾರ್‍ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರುನೂತನ ಶಾಸಕ ಉಮನಾಥ್ ಕೋಟ್ಯಾನ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಕೋಟ್ಯಾನ್ ಅವರು ಕಳೆದ ನಾಲ್ಕು ವರ್ಷಗಳಿಂದ ಸಂಸದರ ಕ್ಷೇತ್ರ ಪ್ರವಾಸ ಹಾಗೂ ಕಾರ್ಯಕರ್ತರ ಜೊತೆಗಿನ ಚರ್ಚೆ ಅಭಿವೃದ್ಧಿ ಕಾರ್ಯ ನಡೆಸಲು ಯೋಗ್ಯವಾಗಿದೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಜನಪ್ರತಿನಿಧಿಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.ಮೂಡುಬಿದಿರೆ ಮಂಡಲ ಅಧ್ಯಕ್ಷ ಈಶ್ವರ ಕಟೀಲ್ ಅಧ್ಯಕ್ಷತೆಯನ್ನು ವಹಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ ಅಧಿಕಾರಿ, ಪ್ರಧಾನ ಕಾರ್‍ಯದರ್ಶಿ ಸುದರ್ಶನ ಎಂ., ಮಂಡಲ ಪ್ರಧಾನ ಕಾರ್‍ಯದರ್ಶಿ ಸುಕೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

Leave a Reply