Header Ads
Header Ads
Breaking News

ಆದಿವಾಸಿಗಳ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹ : ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನಾ ಸಭೆ

ಬಾಂಜಾರು ಮಲೆಕುಡಿಯ ಕಾಲನಿಯ ಜಮೀನಿನ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು, ಆದಿವಾಸಿಗಳು ವಾಸಿಸುವ ಕಾಲನಿಗಳಿಗೆ ರಸ್ತೆ, ವಿದ್ಯುತ್ ಸಂಪರ್ಕ ಒದಗಿಸಲು ಕ್ರಮ ಕೈಗೊಳ್ಳಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಚಲೋ ಪ್ರತಿಭಟನಾ ಪ್ರದರ್ಶನ ನಡೆಯಿತು.

ಈ ವೇಳೆ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಗುರುಶಾಮ್ ಮಾತನಾಡಿ, ಜಿಲ್ಲೆಯ ಮೂಲನಿವಾಸಿ ಆದಿವಾಸಿಗಳು ಇಂದು ಹಲವಾರು ಗಂಭೀರ ಸ್ವರೂಪದ ಸಮಸ್ಯೆಗಳ ಸುಳಿಯಲ್ಲಿ ಬದುಕುತ್ತಿದ್ದಾರೆ. ರಾಜ್ಯ ಸರ್ಕಾರ ಮಾತ್ರ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈವೇಳೆ ಸಿಪಿಐಎಂ ಮುಖಂಡ ವಸಂತ್ ಆಚಾರ್ಯ, ಡಿವೈಎಫ್‌ಐ ಮುಖಂಡ ಇಮ್ತಿಯಾಜ್ ,ಸಂಘದ ಅಧ್ಯಕ್ಷ ವಸಂತ ನಡ, ಸಮಿತಿಯ ಪದಾಧಿಕಾರಿಗಳಾದ ಜಯಾನಂದ ಪಿಲಿಕಲ, ನಾಗೇಶ್ ಬಾಂಜಾರು, ಲಕ್ಷ್ಮಣ ಆಲಂಗಾಯಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *