Header Ads
Header Ads
Breaking News

ಆದಿ ಉಡುಪಿಯಲ್ಲಿ ತಲೆ ಎತ್ತಲಿದೆ ರಂಗಾಯಣ:ಸಚಿವೆ ಜಯಮಾಲಾರಿಂದ ಶಿಲಾನ್ಯಾಸ

ನಮ್ಮ ಜಿಲ್ಲೆ ಕಲಾವಿದರ ಆಗರ. ಸಾಂಸ್ಕೃತಿಕ ಮತ್ತು ಕಲಾಕ್ಷೇತ್ರದಲ್ಲಿ ಹಲವಾರು ದಿಗ್ಗಜರು ಇಲ್ಲಿ ಜನ್ಮ ತಾಳಿದ್ದಾರೆ. ಇಲ್ಲಿನ ಆವಶ್ಯಕತೆಯನ್ನು ಮನಗಂಡು ರಂಗಾಯಣವನ್ನು ಇಲ್ಲಿಗೆ ನೀಡಲಾಗಿದೆ ಎಂದು ಸಚಿವೆ ಡಾ| ಜಯಮಾಲಾ ಹೇಳಿದರು.ಆದಿ ಉಡುಪಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತಗಳ ಆಶ್ರಯದಲ್ಲಿ ನಡೆದ ರಂಗಮಂದಿರ ಮತ್ತು ರಂಗಾಯಣದ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಮಾತನಾಡಿ, ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವಾಗ ಉಡುಪಿ ಜಿಲ್ಲೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಸಾಧಕರು ಸಿಕ್ಕಿದ್ದರು. ಇಂತಹ ಕಲಾವಿದರ, ಕಲಾಪೋಷಕರ ಜಿಲ್ಲೆಗೆ ರಂಗಮಂದಿರ ಮತ್ತು ರಂಗಾಯಣದ ಆವಶ್ಯಕತೆ ಇದೆ ಎನ್ನುವುದನ್ನು ಮನಗಂಡು ಇವನ್ನು ನೀಡಲಾಗಿದೆ. ಇವುಗಳ ಮೂಲಕ ಜಿಲ್ಲೆಯ ಕಲಾ ಪ್ರಪಂಚಕ್ಕೆ ಹೊಸ ಆಯಾಮ ಸಿಗಲಿದೆ ಎಂದರು.ರಂಗಮಂದಿರಕ್ಕೆ 2 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈಗಾಗಲೇ 50ಲಕ್ಷ ರೂ.ವನ್ನು ಜಿಲ್ಲಾಡಳಿತ ಬಿಡುಗಡೆಗೊಳಿಸಿದೆ. ರಂಗಾಯಣಕ್ಕೆ ೫ ಕೋ.ರೂ. ಅಂದಾಜು ವೆಚ್ಚವನ್ನು ಇರಿಸಲಾಗಿದ್ದು, ಮುಂದಿನ ಬಜೆಟ್‌ನಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ತಿಳಿಸಿದರು.

ರಂಗಕರ್ಮಿ ಗೋಪಾಲಕೃಷ್ಣ ನಾಯಿರಿ ಮಾತನಾಡಿ, ನಮ್ಮ ನಾಟಕಗಳು ತಾಲೀಮು ಇಲ್ಲದೆ ಸೋಲುತ್ತಿವೆ. ರಂಗಾಯಣದಲ್ಲಿ ಸರಿ ಯಾದ ತಾಲೀಮು ಕೊಠಡಿ ಅಗತ್ಯ ಎಂದು ಸಚಿವರಲ್ಲಿ ಮನವಿ ಮಾಡಿದರು. ರಂಗಾಯಣಕ್ಕೆಂದೇ ನಿಗದಿಯಾದ ಸ್ಥಳದಲ್ಲಿ ಅದು ನಿರ್ಮಾಣವಾಗಲಿದೆ. ರಂಗಮಂದಿರಕ್ಕೆ ಇಲ್ಲಿಯೇ ಪಕ್ಕದಲ್ಲಿ ಇನ್ನೊಂದು ಸ್ಥಳವನ್ನು ಜಿಲ್ಲಾಧಿಕಾರಿ ಸೂಚಿಸಿದ್ದು, ಅಲ್ಲಿ ನಿರ್ಮಿಸುವ ಬಗ್ಗೆ ಚರ್ಚಿಸಲಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ರಂಗಾಯಣ ನಿರ್ದೇಶಕ ಮಹೇಶ್ ಪಾಟೀಲ್, ರಂಗಸಮಾಜದ ಸದಸ್ಯರಾದ ಎಲ್. ಕೃಷ್ಣಪ್ಪ, ಉಮಾ ಬಾರಿಗಿಡದ, ಶ್ರೀಪಾದ ಭಟ್, ಸಹನಾ ಪಿಂಜಾರ, ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಮುಖ್ಯಸ್ಥ ಕೆರೆಮನೆ ಶಿವಾನಂದ ಹೆಗಡೆ, ನಾಟಕ ಅಕಾಡೆಮಿಯ ಸದಸ್ಯ ಬಾಸುಮ ಕೊಡಗು ಉಪಸ್ಥಿತರಿದ್ದರು.

Related posts

Leave a Reply