Header Ads
Header Ads
Header Ads
Breaking News

ಆದಿ ದ್ರಾವಿಡ ಜನಾಂಗದ ಕಾಲೋನಿಗೆ ರಸ್ತೆ, ವಿದ್ಯುತ್ ಕಲ್ಪಿಸಿ ಸ್ಥಳೀಯರಿಂದ ಮತ್ತು ಬಿಜೆಪಿ ಎಸ್‌ಸಿ ಮೋರ್ಚಾದಿಂದ ಪ್ರತಿಭಟನೆ ಬಂಟ್ವಾಳದ ಪರಾರಿ ನಾಗರಿಕರಿಂದ ಅಧಿಕಾರಿಗಳಿಗೆ ಧಿಕ್ಕಾರ

ಬಂಟ್ವಾಳದ ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಪರಾರಿ ಎಂಬಲ್ಲಿನ ಆದಿ ದ್ರಾವಿಡ ಜನಾಂಗದವದರ ಕಾಲೋನಿಗೆ ರಸ್ತೆ ಸಂಪರ್ಕ ಹಾಗೂ ವಿದ್ಯುತ್ ದಾರಿ ದೀಪ ಕಲ್ಪಿಸಿ ಕೊಡುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಬಿಜೆಪಿ ಎಸ್‌ಸಿ ಮೋರ್ಚದ ವತಿಯಿಂದ ಪುರಸಭಾ ಕಾರ್ಯಲಯದ ಮುಂದೆ ಪ್ರತಿಭಟನೆ ನಡೆಸಿದರು.

ಕಳೆದ ಹಲವು ವರ್ಷಗಳಿಂದ ಪರಿಶಿಷ್ಠ ಜಾತಿ ಕಾಲೋನಿಗೆ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ದಿ ಪಡಿಸುವಂತೆ ಪುರಸಭೆಗೆ ಮನವಿ ನೀಡಲಾಗಿದೆ. ಅಲ್ಲದೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಭೆಗಳಲ್ಲಿಯೂ ಪ್ರಸ್ತಾಪಿಸಲಾಗಿದೆ. ಆದರೆ ಪುರಸಭಾ ಆಡಳಿತ ಹಾಗೂ ಅಧಿಕಾರಿಗಳು ಸ್ಪಂದನೆ ನೀಡದೆ ಇರುವುದರಿಂದ ರಸ್ತೆ ಅಭಿವೃದ್ದಿಯಾಗದೇ ಉಳಿದಿದೆ. ರಸ್ತೆ ಅಭಿವೃದ್ದಿಯಾಗದೇ ಇದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎರಡು ವಾರಗಳ ಹಿಂದೆಯೇ ಪುರಸಭೆಯ ಗಮನಕ್ಕೆ ತರಲಾಗಿದ್ದು ನಿರ್ಲಕ್ಷ ವಹಿಸಿದ ಪರಿಣಾಮ ಅನಿವಾರ್ಯವಾಗಿ ಪ್ರತಿಭಟನೆ ನಡೆಸಬೇಕಾಗಿದೆ ಎಂದು ಸಂಘದ ಮುಖಂಡ ಗಂಗಾಧರ ಕೋಟ್ಯಾನ್ ಆರೋಪಿಸಿದರು.

ಪ್ರತಿಭಟನೆ ನಡೆಸಲು ಆಗಮಿಸಿದ ತಮ್ಮನ್ನು ಗೇಟ್‌ನ ಹೊರಭಾಗದಲ್ಲೇ ನಿಲ್ಲುವಂತೆ ಪೊಲೀಸರು ಸೂಚಿಸಿದಾಗ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಕಾರರು ಎಸ್‌ಸಿ‌ಎಸ್‌ಟಿ ಸೆಲ್‌ನ ಪೊಲೀಸ್ ಅಧೀಕ್ಷಕ ವೇದಮೂರ್ತಿಯವರಿಗೆ ದೂರವಾಣಿ ಕರೆ ಮಾಡಿ ಪುರಸಭೆಗೆ ದಲಿತರಿಗೆ ದೌರ್ಜನ್ಯ ಮಾಡುತ್ತಿದೆ, ಪ್ರತಿಭಟಿಸುವ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಅಳಲು ತೋಡಿಕೊಂಡರು. ಸುಮಾರು ಎರಡು ಗಂಟೆಗಳ ಪ್ರತಿಭಟನೆಯ ಬಳಿಕ ಪೊಲೀಸರ ಮಧ್ಯಸ್ಥಿತಿಕೆಯಲ್ಲಿ ಶೀಘ್ರ ರಸ್ತೆ ಕಾಮಗಾರಿ ಕೈಗೊಳ್ಳುವ ಬಗ್ಗೆ ಪುರಸಭಾ ಅಧಿಕಾರಿಗಳು ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಕೈ ಬಿಡಲಾಯಿತು.

ವರದಿ: ಸಂದೀಪ್ ಬಂಟ್ವಾಳ

Related posts

Leave a Reply