Breaking News

ಆದ್ಯತೆಯ ಮೇಲೆ ಗ್ರಾಮೀಣ ರಸ್ತೆಗಳಿಗೆ ಕಾಂಕ್ರೀಟು, ಮೆನ್ನಬೆಟ್ಟು ರಸ್ತೆ ಉದ್ಘಾಟಿಸಿ ಅಭಯಚಂದ್ರ ಜೈನ್


ಗ್ರಾಮೀಣ ಪ್ರದೇಶದ ರಸ್ತೆಗಳಿಗೆ ಒತ್ತು ಕೊಟ್ಟು ಕಾಂಕ್ರಿಟೀಕರಣಗೊಳಿಸಲಾಗುದು ಎಂದು ಮುಲ್ಕಿ ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್ ಹೇಳಿದರು ಅವರು ಮೆನ್ನಬೆಟ್ಟು ಮತ್ತು ಕಟೀಲು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಸುಮಾರು ೫೦ ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆಯ ಉದ್ಘಟನೆ ಮತ್ತು ನೂತನ ರಸ್ತೆಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಸಿದ್ದರಾಮಯ್ಯನವರ ಸರಕಾರ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದೆ ಅನ್ನಭಾಗ್ಯದಂತಹ ಅನೇಕ ಜನಪರ ಕೆಲಸಗಳನ್ನು ಮಾಡಿ ಮಾದರಿ ಸರಕಾರವಾಗಿದೆ ಎಂದರು. ಈ ಸಂದರ್ಭ ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರೋಜಿನಿ, ಜಿಲ್ಲಾ ಯೂತ್ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶೈಲಾ ಸಿಕ್ವೇರ, ತಿಮ್ಮಪ್ಪ ಕೋಟ್ಯಾನ್, ಮುಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಮಟ್ಟು, ಮುಲ್ಕಿ ನಗರ ಪಂಚಾಯತ್ ಸದಸ್ಯ ಅಸೀಪ್, ಉದ್ಯಮಿ ಡಾಲ್ಪಿ ಸಂತುಮಯೋರ, ಪಂಚಾಯತ್ ಸದಸ್ಯರಾದ ಮೋರ್ಗನ್ ವಿಲಿಯಂ, ಸುನೀಲ್ ಸಿಕ್ವೇರ, ಮಯ್ಯದಿ ಪಕ್ಷಿಕೆರೆ ಮತ್ತಿತರರು ಇದ್ದರು.

Related posts

Leave a Reply