Header Ads
Header Ads
Header Ads
Breaking News

ಆನಗಳ್ಳಿ ಡ್ಯಾಂ ಪುನರ್ ನಿರ್ಮಾಣಕ್ಕೆ ಆಗ್ರಹ ಕುಂದಾಪುರದಲ್ಲಿ ರೈತ ಸಂಘದಿಂದ ಪ್ರತಿಭಟನೆ

ಕುಂದಾಪುರದ ಆನಗಳ್ಳಿಯಲ್ಲಿರುವ ಡ್ಯಾಂನ್ನ ಪುನರ್ ನಿರ್ಮಾಣ ಮಾಡಿ ಸಿ‌ಆರ್‌ಝೆಡ್ ಸಮಸ್ಯೆಯನ್ನ ಪರಿಹರಿಸಬೇಕೆಂದು ಆಗ್ರಹಿಸಿ ರೈತ ಸಂಘದ ವತಿಯಿಂದ ಬೃಹತ್ ವಾಹನ ಜಾಥಾ ನಡೆಯಿತು.
ವಾಹನ ಜಾಥಾಗೆ ನಗರ ಅಭಿವೃದ್ಧಿ ಪ್ರಾಧಿಕಾರದ ವಿಕಾಸ್ ಹೆಗ್ಡೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು 80 ರ ದಶಕದಲ್ಲಿ ಆರಂಭಗೊಂಡ ಆನಗಳ್ಳಿ ಡ್ಯಾಂ ತಾಂತ್ರಿಕ ಕಾರಣಗಳಿಂದ ದಶಕದ ಹಿಂದೆ ವಿಫಲಗೊಂಡಿತ್ತು. ಅದು ಸುಸ್ಥಿತಿಯಲ್ಲಿದ್ದ ಸಂದರ್ಭ ಹಿನ್ನಿರಿನ ಪ್ರದೇಶಗಳಿಗೆ ಜೀವಾಳವಾಗಿತ್ತು.

ಈಗ ವಾರಾಹಿ ನೀರು ಕೂಡ ಇಲ್ಲಿ ಹರಿದು ಬರುತ್ತಿದ್ದು. ಈ ಡ್ಯಾಂ ಪುನರ್ ನಿರ್ಮಾಣ ಮಾಡಿದ್ದಲ್ಲಿ ಆನಗಳ್ಳಿ, ಬಸ್ರೂರು, ಕೋಣಿ, ಮೊದಲಾದ ಪ್ರದೇಶಗಳಿಗೆ ಅನುಕೂಲವಾಗುತ್ತದೆ. ಈಗ ಸಿ‌ಆರ್‌ಝೆಡ್ ನೂತನ ಅಧಿಸೂಚನೆಯ ಪ್ರಕಾರ ಬಸ್ರೂರು, ಕೋಣಿ, ಕುಂದಾಪುರ ವಡೇರಹೊಬಳಿಯ ಹಲವು ಪ್ರದೇಶಗಳನ್ನ ಗುರುತಿಸಲಾಗಿದೆ. ಒಂದು ವೇಳೆ ಈ ಅಧಿಸೂಚನೆ ಜಾರಿಗೊಂಡಲ್ಲಿ ಇಲ್ಲಿನ ಜನರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಸಮಸ್ಯೆಯಾಗುತ್ತದೆ. ಈ ಹಿನ್ನೆಲೆ ಆನಗಳ್ಳಿ ಡ್ಯಾಂನ್ನು ಪುನರ್ ನಿರ್ಮಾಣ ಮಾಡಿದ್ದಲ್ಲಿ ಈ ಸಿ‌ಆರ್‌ಝೆಡ್ ಸಮಸ್ಯೆಗೆ ಮುಕ್ತಿ ದೊರಕಲಿದೆ ಎಂದು ಈ ಸಂದರ್ಭ ರೈತರ ಪರ ಆಗ್ರಹಿಸಿದರು.

ಆನಗಳ್ಳಿಯಿಂದ ಆರಂಭಗೊಂಡ ಜಾಥಾ ಬಸ್ರೂರು ಮಾರ್ಗವಾಗಿ ಮಿನಿವಿಧಾನ ಸೌಧಕ್ಕೆ ತೆರಳಿತು. ಅಲ್ಲಿ ಎಸಿ ಶಿಲ್ಪಾನಾಗ್‌ಗೆ ಮನವಿ ಸಲ್ಲಿಸಲಾಯಿತು.

Related posts

Leave a Reply