Header Ads
Header Ads
Breaking News

ಆನಗಳ್ಳಿ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರ ಗೈರು ಶಾಲಾ ಚಟುವಟಿಕೆಗಳು ಹಿನ್ನೆಡೆ ಮುಖ್ಯ ಶಿಕ್ಷಕರ ವರ್ಗಾವಣೆಗೆ ಆಗ್ರಹ ವಿದ್ಯಾರ್ಥಿ ಮತ್ತು ಪೋಷಕರಿಂದ ಪ್ರತಿಭಟನೆ

 

ಕುಂದಾಪುರ: ಆನಗಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರ ಗೈರಿನಿಂದ ಶಾಲಾ ಚಟುವಟಿಕೆಗಳು ಹಿನ್ನೆಡೆಗೊಂಡಿದೆ ಇದರಿಂದ ಈಗಿರುವ ಪ್ರಭಾರ ಮುಖ್ಯೋಪಾಧ್ಯಾರನ್ನ ವರ್ಗಾಯಿಸಿ ಖಾಯಂ ಮುಖ್ಯಶಿಕ್ಷಕರನ್ನ ನೇಮಿಸಬೇಕೆಂದು ಆಗ್ರಹಿಸಿ ಆನಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿದರು.
ಶಾಲೆಯ ಪ್ರಭಾರ ಮುಖ್ಯೋಪಾಧ್ಯಯ ಶಾಲೆಯ ಪ್ರಾರಂಭದಿಂದಲೇ ಗೈರಾಗಿದ್ದು, ಶಾಲೆ ಪ್ರಾರಂಭಗೊಂಡು ಎರಡು ತಿಂಗಳುಗಳೇ ಕಳೆದರೂ, ಇಲ್ಲಿಯವರೆಗೆ ಶಾಲೆಕಡೆ ಮುಖತೋರಿಸಿಲ್ಲ. ಆದ್ದರಿಂದ ಈ ಕೂಡಲೇ ಗೈರುಹಾಜರಾಗಿರುವ ಮುಖ್ಯಶಿಕ್ಷಕನ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರಸ್ತುತ ಶಾಲೆಯಲ್ಲಿ ಐವತ್ತು ವಿದ್ಯಾರ್ಥಿಗಳು ಕಲಿಯುತ್ತಿದ್ದು. ಒಂದು ಕಡೆ ಶಿಕ್ಷಕರ ಕೊರತೆಯಿಂದ ಶಾಲಾ ಚಟುವಟಿಕೆಗಳು ಹಿಂದೆ ಬಿದ್ದಿದ್ದರೆ, ಪ್ರಭಾರ ಮುಖ್ಯಪೊಧ್ಯಾಯರು ಗೈರು ಹಾಜರಿ ಹಿನ್ನೆಲೆ ಮಕ್ಕಳಿಗೆ ಶಿಕ್ಷಣ ಮತ್ತು ಸವಲತ್ತುಗಳು ಸಿಗುತ್ತಿಲ್ಲ. ಈ ಬಗ್ಗೆ ಇಲಾಖೆಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅವರನ್ನು ತಕ್ಷಣ ಅಮಾನತ್ತು ಗೊಳಿಸಿ ನಮಗೆ ಖಾಯಂ ಮುಖ್ಯಶಿಕ್ಷಕರನ್ನ ನೇಮಿಸಿಕೊಡಬೇಕೆಂದು ಆಗ್ರಹಿಸಿದರು . ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶಿಕ್ಷಣಾಧೀಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತೇವೆ ಎಂದು ಪಂಚಾಯತ್ ಸದಸ್ಯ ಪ್ರಭಾಕರ ಮೊಗೇರ ಎಚ್ಚರಿಕೆ ನೀಡಿದರು.
ಈ ಹಿಂದೆ, ಈ ಬಗ್ಗೆ ಬಿಇಓಗೆ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಲಿಖಿತ ದೂರನ್ನು ಕೂಡ ನೀಡಲಾಗಿತ್ತು. ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವ ಹಿನ್ನೆಲೆ ಈಗ ಸಾಂಕೇತಿಕ ಪ್ರತಿಭಟನೆ ಮಾಡಿದ್ದೇವೆ. ಇದಕ್ಕೂ ಬಗ್ಗದಿದ್ದಲ್ಲಿ ಅತೀ ಶೀಘ್ರದಲ್ಲಿ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ಸಮಸ್ಯೆ ಪರಿಹಾರಗೊಳ್ಳುವವರೆಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ರು.
ಪ್ರತಿಭಟನೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ನಾಗರತ್ನ, ಉಪಾಧ್ಯಕ್ಷ ಅಣ್ಣಪ್ಪ, ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related posts

Leave a Reply