Header Ads
Header Ads
Breaking News

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಸಾರಿಗೆ ಸಚಿವ ಭೇಟಿ. ಯಾವುದೇ ಹೊಸ ಆರ್.ಟಿ.ಓ. ಕಚೇರಿ ಮಂಜೂರು ಮಾಡುತ್ತಿಲ್ಲ.

ಕುಂದಾಪುರ: ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರು ಶುಕ್ರವಾರ ಮಧ್ಯಾಹ್ನ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಶ್ರೀರಮಣ ಉಪಾಧ್ಯಾಯ, ಮ್ಯಾನೇಜರ್ ಆನಂದ ಉರಾಳ ಈ ಸಂದರ್ಭ ಉಪಸ್ಥಿತರಿದ್ದು ಸಚಿವರನ್ನು ಬರಮಾಡಿಕೊಂಡರು.ದೇವರ ದರ್ಶನದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಸದ್ಯ ಯಾವುದೇ ಹೊಸ ಆರ್.ಟಿ.ಓ. ಕಚೇರಿ ಮಂಜೂರು ಮಾಡುತ್ತಿಲ್ಲ. ಕರಾವಳಿಯಲ್ಲಿ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಅಗತ್ಯ ಕ್ರಮ ಕೈಗೊಂಡಿದ್ದು ಬೈಂದೂರಿನಲ್ಲಿ ೫ ಕೋಟಿ ವೆಚ್ಚದಲ್ಲಿ ಸರಕಾರಿ ಬಸ್ಸು ನಿಲ್ದಾಣ ಹಾಗೂ ಡಿಪೋ, ಉಡುಪಿ ಹಾಗೂ ಮಂಗಳೂರಿನಲ್ಲಿ30 ಕೋಟಿ ವೆಚ್ಚದಲ್ಲಿ ಆಧುನಿಕ ಬಸ್ಸು ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣ ಮಾಡಲಾಗುವುದು. ಗ್ರಾಮೀಣ ಬಸ್ ವ್ಯವಸ್ಥೆ ನಷ್ಟದಲ್ಲಿದ್ದರೂ ಕೂಡ ಸಮರ್ಪಕವಾಗಿ ಕೆಲಸ ಮಾಡುತ್ತಿದೆ. ಇನ್ನು ಅವಶ್ಯಕತೆಯಿರುವೆಡೆಯಲ್ಲಿ ಸರಕಾರಿ ಬಸ್ ಓಡಾಟಕ್ಕೆ ಸೂಕ್ತ ಕ್ರಮಕೈಗೊಳ್ಳುತ್ತೇವೆಂದರು.ಈ ಸಂದರ್ಭ ಕುಂದಾಪುರದಲ್ಲಿ ನೂತನ ಆರ್.ಟಿ.ಓ. ಕಚೇರಿ ಸ್ಥಾಪನೆ, ಸಾಲಿಗ್ರಾಮ ಪಟ್ಟಣ ಪಂಚಾಯತಿ ವ್ಯಾಪ್ತಿಯ ಪಾರಂಪಳ್ಳಿ-ಪಡುಕೆರೆ ಶಾಶ್ವತ ಸೇತುವೆ ನಿರ್ಮಿಸುವಂತೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭ ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ರಾಜ್ಯ ನಾಯಕ ದಿಲ್ಲೇಶ್ ಶೆಟ್ಟಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ರಮೇಶ್ ಟಿ.ಟಿ., ರಝಾಕ್ ಉಚ್ಚಿಲ, ಜಿಲ್ಲಾ ವೀಕ್ಷಕ ಸುಧಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯರಾಂ ಆಚಾರ್ಯ, ಕುಂದಾಪುರ ವಿಧಾನಸಭಾ ಕ್ಷೇತ್ರ ಕಾರ್ಯಾಧ್ಯಕ್ಷ ಹುಸೇನ್ ಹೈಕಾಡಿ, ತಾಲೂಕು ಮಹಿಳಾ ಉಪಾಧ್ಯಕ್ಷೆ ರಶ್ಮಿತಾ ಪೂಜಾರಿ ವಕ್ವಾಡಿ, ಮೀನುಗಾರ ಘಟಕದ ಅಧ್ಯಕ್ಷ ಶಿವರಾಜ್ ಪೂಜಾರಿ, ಜೆಡಿಎಸ್ ಮುಖಂಡರಾದ ಅರುಣ ಕುಮಾರ್ ಕಲ್ಗದ್ದೆ, ಸಬ್ಲಾಡಿ ಮಂಜಯ್ಯ ಶೆಟ್ಟಿ ಇದ್ದರು.

Related posts

Leave a Reply