Header Ads
Breaking News

ಭಕ್ತರಿಗೆ ನೆಮ್ಮದಿ ಸಿಗಲಿ ಎಂಬ ಕಾರಣಕ್ಕೆ ಆನ್ ಲೈನ್ ಆರಂಭಿಸಿದ್ದೇವೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಲಾಕ್ಡೌನ್ ನಿಂದ ಭಕ್ತರಿಗೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ.ಹರಕೆ ಹೊತ್ತ ಭಕ್ತರಿಗೆ ಆನ್ಲೈನ್ ಸೇವೆಯಿಂದ ಅನುಕೂಲವಾಗಲಿದೆ.ಭಕ್ತರಿಗೆ ನೆಮ್ಮದಿ ಸಿಗಲಿ ಎಂಬ ಕಾರಣಕ್ಕೆ ಆನ್ ಲೈನ್ ಆರಂಭಿಸಿದ್ದೇವೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಆನ್ ಲೈನ್ ಸೇವೆಬಗ್ಗೆ ಕೆಲವರು ಆಕ್ಷೇಪ ಮಾಡಿದ್ದಾರೆ.ಆನ್ ಲೈನ್ ಸೇವೆ ನಮ್ಮ ಇಲಾಖೆಯಲ್ಲಿ ಈ ಮೊದಲೇ ಇದೆ. ಈಗ ಮತ್ತಷ್ಟು ದೇವಸ್ಥಾನಗಳನ್ನು ಆನ್ ಲೈನ್ ಸೇವೆಯ ವ್ಯಾಪ್ತಿಗೆ ಇಲಾಖೆ ತರುತ್ತಿದೆ.ಕೊಲ್ಲೂರು ದೇವಸ್ಥಾನದಲ್ಲಿ ಕಲಕೆದ ವರ್ಷ ಮೂರು ಸಾವಿರ ಆನ್ಲೈನ್ ಸೇವೆಗಳು ಬಂದಿವೆ.ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಲ್ಲೂ ಆನ್‍ಲೈನ್ ಸೇವೆಯಿದೆ. ಕಳೆದ ವರ್ಷ ಈ ಆನ್‍ಲೈನ್ ಸೇವೆಯಿಂದ 49.50 ಲಕ್ಷ ರುಪಾಯಿ ಜಮಾ ಆಗಿದೆ. ಲಾಕ್ಡೌನ್ ನಿಂದ ಭಕ್ತರಿಗೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ.ಹರಕೆ ಹೊತ್ತ ಭಕ್ತರಿಗೆ ಆನ್ಲೈನ್ ಸೇವೆಯಿಂದ ಅನುಕೂಲವಾಗಲಿದೆ. ಭಕ್ತರಿಗೆ ನೆಮ್ಮದಿ ಸಿಗಲಿ ಎಂಬ ಕಾರಣಕ್ಕೆ ಆನ್ ಲೈನ್ ಆರಂಭಿಸಿದ್ದೇವೆ.ಲಾಕ್ ಡೌನ್ ವರೆಗಾದರೂ ಆನ್ಲೈನ್ ಸೇವೆ ಅಗತ್ಯವಿದೆ.ಭಕ್ತರ ಕೋರಿಕೆ ಹಿನ್ನೆಲೆಯಲ್ಲಿ ಈ ಸೇವೆ ಆರಂಭವಾಗಿದೆ.ದೇವಸ್ಥಾನಗಳಿಗೆ ಬಾಗಿಲು ಹಾಕಿದೆ ಪೂಜೆ ಆಗುತ್ತಿಲ್ಲ ಎಂದು ಸುದ್ದಿಯಾಗುತ್ತಿದೆ.ಎಲ್ಲಾ ದೇವಸ್ಥಾನಗಳನ್ನು ಸಾಂಪ್ರದಾಯಿಕ ಪೂಜೆ ನಡೆಯುತ್ತದೆ.ತ್ರಿಕಾಲ, ಕಾಲಮಿತಿಯ ಪೂಜೆಗಳು ನಡೆಯುತ್ತಿವೆ.ದೇವಸ್ಥಾನದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಇದೆ.ಲಾಕ್ ಡೌನ್ ಮುಗಿದ ನಂತರವೇ ದೇವಸ್ಥಾನ ತೆರೆಯುವ ಅನಿವಾರ್ಯತೆ ಇದೆ ಎಂದರು. ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುತ್ತೆದೆ. ಮೊದಲೇ ನಿಶ್ಚಯವಾದ ಮದುವೆಗಳಿಗೆ ಅಡ್ಡಿ ಇಲ್ಲ ನಿಶ್ಚಿತ ಮದುವೆಗಳಿಗೆ ಲಾಕ್ ಡೌನ್ ನಿಂದ ರಿಯಾಯಿತಿ ನೀಡಿದ್ದೇವೆ .ಹಾಲು ಮೆಡಿಕಲ್ ಸೇವೆ ಸೇರಿದಂತೆ ಮೂಲಭೂತ ಅವಶ್ಯಕತೆಗಳಿಗೆ ಸರಕಾರ ವಿನಾಯತಿ ನೀಡಿದೆ ಎಂದರು.

Related posts

Leave a Reply

Your email address will not be published. Required fields are marked *