Header Ads
Breaking News

ಆಪತ್ಭಾಂಧವ ಸಂಘದ ವತಿಯಿಂದ ಗೋರಕ್ಷಣೆ, ಗೋ ಜಾಗೃತಿ ಕಾರ್ಯಕ್ರಮ

ಆಪತ್ಭಾಂಧವ ಸಮಾಜ ಸೇವಾ ಸಂಘದ ವತಿಯಿಂದ ಗೋರಕ್ಷಣೆ ಹಾಗೂ ಗೋಕಳ್ಳತನ ಆಗದಿರುವಂತೆ ಗೋವುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಕುರಿತು ಮನೆ ಮನೆ ಗೋಜಾಗೃತಿ ಕಾರ್ಯಕ್ರಮವು ಸುರತ್ಕಲ್‌ನಲ್ಲಿ ಜರುಗಿತು. ಹಿರಿಯ ಕೃಷಿಕ ಗಿರಿಯಪ್ಪ ಇಡ್ಯಾ ಗೋವುಗಳ ಕಾಳಜಿ ಕುರಿತು ಹಾಗೂ ಅದರ ಸ೦ರಕ್ಷಣೆ ಕುರಿತು ಅಗತ್ಯ ಮಾಹಿತಿಯನ್ನು ನೀಡಿದರು. ಸುರತ್ಕಲ್ ಕಾನ ನಿವಾಸಿ ಮಾಧವಿ ಹಾಗೂ ಕೃಷ್ಣಾಪುರದ ನಿವಾಸಿ ಲಲಿತಾ ಅವರ ಮನೆಗಳಿಗೆ ತೆರಳಿ ಅಗತ್ಯ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಆಪತ್ಭಾಂಧವ ಸಮಾಜ ಸೇವಾ ಸಂಘದ ಸ್ಥಾಪಕಧ್ಯಕ್ಷ ಉಮೇಶ್ ದೇವಾಡಿಗ ಇಡ್ಯಾ, ವಾಸುದೇವ ಶೆಟ್ಟಿ ತಡಂಬೈಲು, ಕಿಶೋರ್ ಭಟ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *