Header Ads
Breaking News

ಆಯಾಯ ದೇವರಿಗೆ ಸಲ್ಲಬೇಕಾದ ರೀತಿಯಲ್ಲೇ ಪೂಜೆ ನಡೆಯಬೇಕು ಅಂತರ್ಯಾಮಿ ಪೂಜೆ ಸಲ್ಲದು : ಮಹೇಶ್ ಕುಮಾರ್ ಕೆ.ಎಸ್ ಹೇಳಿಕೆ

ಸಾರ್ವಜನಿಕ ದೇವಸ್ಥಾನಗಳಲ್ಲಿ ಅಯಾಯ ದೇವರಿಗೆ ಸಲ್ಲಬೇಕಾದ ರೀತಿಯಲ್ಲೇ ಪೂಜೆ ನಡೆಯಬೇಕು. ಅಂತರ್ಯಾಮಿ ಪೂಜೆ ಸಲ್ಲದು ಇದು ಶೈವ-ವೈಷ್ಣವ ವಿವಾದ ಅಲ್ಲ, ಹಿಂದೂ ಏಕತೆಯ ವಿಚಾರ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಮಹೇಶ್ ಕುಮಾರ್ ಹೇಳಿದರು.
ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶಿವರಾತ್ರಿಯಂದು ಪೂಜೆಯ ವಿಚಾರದಲ್ಲಿ ಗೊಂದಲ ಸೃಷ್ಠಿಯಾಗಿತ್ತು. ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಸಾರ್ವಜನಿಕ ದೇವಸ್ಥಾನಗಳಲ್ಲಿ ಆಯಾಯ ದೇವರುಗಳಿಗೆ ಅಯಾಯ ರೀತಿಯಲ್ಲಿ ದೇವರಿಗೆ ಸಲ್ಲಬೇಕಾದ ರೀತಿಯಲ್ಲೇ ಪೂಜೆ ನಡೆಯಬೇಕು. ಪೂಜಾ ಪದ್ಧತಿಯಲ್ಲಿ ದೇವತಾ ತಾರತಮ್ಯ ಸಲ್ಲದು. ಮಾಧ್ವರ ಬಗ್ಗೆ ನಮ್ಮ ವಿರೋಧವಿಲ್ಲ. ಹಾಗಂತ ಕೆಲವರು ನಮ್ಮನ್ನು ಬಿಂಬಿಸುತ್ತಾರೆ ಅಷ್ಟೇ. ಶಿವಳ್ಳಿ ಬ್ರಾಹ್ಮಣರ ಪೈಕಿ ಶೇ. 75 ಮಂದಿ ಎಲ್ಲಾ ದೇವರನ್ನು ಪೂಜಿಸುತ್ತಾರೆ. ಆದರೆ ಶಿವಳ್ಳಿಯಲ್ಲಿ ಶೇ. 25 ಮಾಧ್ವ ಬ್ರಾಹ್ಮಣರು ಮಾತ್ರ ಎಲ್ಲಾ ದೇವರನ್ನು ಪೂಜಿಸುವುದಿಲ್ಲ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಬಹುತೇಕ ಸಾರ್ವಜನಿಕ ದೇವಸ್ಥಾನಗಳಲ್ಲಿ ಶಿವಳ್ಳಿ ಮಾಧ್ವ ಬ್ರಾಹ್ಮಣರೇ ಮಾಡುತ್ತಿದ್ದಾರೆ. ಇವರು ಪೂಜೆ ಮಾಡುವಾಗ ನೇರವಾಗಿ ಆಯಾ ದೇವಾಲಯದಲ್ಲಿ ಇರುವ ಮೂಲ ದೇವರಿಗೆ ಪೂಜೆ ಮಾಡದೆ ವಿಷ್ಣುವಿಗೆ ಪೂಜೆ ಮಾಡುತ್ತಾರೆಯೇ ಹೊರತು ಮೂಲ ದೇವರಿಗಿಲ್ಲ. ಶಿವಲಿಂಗಕ್ಕೆ ವಿಷ್ಣು ಅಂತರ್ಯಾಮಿ ಎಂದು ಪೂಜೆ ಮಾಡುತ್ತಾರೆ. ಶಿವ ದೇವರ ನೈವೈಧ್ಯ ಪ್ರಸಾದ ಇವರು ಸ್ವೀಕರಿಸುವುದಿಲ್ಲ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಶ್ರೀನಾಥ್ ಟಿ.ಎಸ್. ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *