Header Ads
Header Ads
Breaking News

ಆಯುಧಗಳಿಂದ ಯಾವುದೇ ಸಮಸ್ಯೆಗೆ ಪರಿಹಾರವಿಲ್ಲ ಆಧ್ಯಾತ್ಮದಿಂದ ತೊಂದರೆಗಳನ್ನು ನಿವಾರಿಸಬಹುದು ಒಡಿಯೂರು ಗುರುದೇವಾನಂದ ಸ್ವಾಮೀಜಿ ಹೇಳಿಕೆ

 

ರಾಷ್ಟ್ರಕ್ಕೆ ತೊಂದರೆಯಾಗುವ ಸಮಯ ಒಗ್ಗಟ್ಟಿನಿಂದ ಎದುರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಸಂತರ ಪಾತ್ರ ಮಹತ್ವದ್ದು. ಆಯುಧಗಳಿಂದ ಯಾವುದೇ ಸಮಸ್ಯೆಗೆ ಪರಿಹಾರ ಇರುವುದಿಲ್ಲ. ಆಧ್ಯಾತ್ಮದಿಂದ ಎಲ್ಲಾ ರೀತಿಯ ತೊಂದರೆಗಳನ್ನು ನಿವಾರಿಸಬಹುದು. ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಕ್ಕಾಗ ಆದರ್ಶ ಸಮಾಜ ಕಟ್ಟಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಶ್ರೀಗಳ ಜನ್ಮದಿನೋತ್ಸವದ ಅಂಗವಾಗಿ ನಡೆದ ಗ್ರಾಮೋತ್ಸವದ ಸಭಾ ಕಾರ್ಯಕ್ರಮದಲ್ಲಿ ಗ್ರಾಮೋಭ್ಯುದಯ ಕೃತಿ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.

ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಸಮಸ್ಯೆಗಳು ಬಂದಾಗ ನಿವಾರಣೆ ಮಾಡಿ ಸಮಾಜವನ್ನು ಉಳಿಸುವಲ್ಲಿ ಗುರುಪರಂಪರೆಗಳ ಪಾತ್ರ ಮಹತ್ವದ್ದು. ವ್ಯಕ್ತಿ ನಿರ್ಮಾಣ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಗುರು ದಿಗ್ದರ್ಶನ ಬೇಕು ಎಂದು ಹೇಳಿದರು.


ಕುಂಡಾಜೆ, ವರ್ಕಾಡಿ, ಕಬ್ಯಾಡಿ ಘಟ ಸಮಿತಿಗಳಿಗೆ ಆದರ್ಶ ಘಟ ಸಮಿತಿ ಪ್ರಶಸ್ತಿ ನೀಡಲಾಯಿತು. ವಿಸ್ತರಣಾಧಿಕಾರಿ ಸುರೇಶ್ ಶೆಟ್ಟಿ ಮೊಗರೋಡಿ ಉತ್ತಮ ಕಾರ್ಯವೈಖರಿ ಬಹುಮಾನ ಪಡೆದುಕೊಂಡರು. ವರ್ಕಾಡಿ ಮಮತ ಲಕ್ಷ್ಮಿ ಉತ್ತಮ ಸೇವಾಧೀಕ್ಷೆ ಬಹುಮಾನ ಪಡೆದರು. ಬಂಟ್ವಾಳ ತಾಲೂಕು ಸದಾಶಿವ ಅಳಿಕೆ ಅವರಿಗೆ ತಾಲೂಕು ಮಟ್ಟದ ಉತ್ತಮ ವಿಸ್ತರಣಾಧಿಕಾರಿಯಾಗಿ ಬಹುಮಾನ ವಿತರಿಸಲಾಯಿತು.
ಸಾಧ್ವೀ ಶ್ರೀ ಮಾತಾನಂದಮಯೀ, ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸುರೇಶ್ ಬಳ್ಳಾಲ್, ಮಂಗಳೂರು ಅಸಿಸ್ಟೆಂಟ್ ಕಮೀಶನರ್ ಎ. ಸಿ. ರೇಣುಕಾಪ್ರಸಾದ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ., ಮುಂಬಯಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಉಪಾಧ್ಯಕ್ಷ ಚಂದ್ರಹಾಸ ಎಂ. ರೈ ಬೋಳ್ನಾಡುಗುತ್ತು, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎ. ಸುರೇಶ್ ರೈ ಉಪಸ್ಥಿತರಿದ್ದರು.

ರೇಣುಕಾ ಎಸ್. ರೈ ಪ್ರಾರ್ಥಿಸಿದರು. ಶ್ರೀಗಳ ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಎಚ್. ಕೆ. ಪುರುಷೋತ್ತಮ ಸ್ವಾಗತಿಸಿದರು. ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆ ಮೇಲ್ವಿಚಾರಕ ಸದಾಶಿವ ಅಳಿಕೆ ವರದಿ ಮಂಡಿಸಿದರು. ನವೀನ್ ಶೆಟ್ಟಿ ಮಂಗಳೂರು, ಸುರೇಶ್ ಶೆಟ್ಟಿ ಮೊಗರೊಡಿ, ಯಶೋಧರ ಸಾಲ್ಯಾನ್ ಬೆಳ್ತಂಗಡಿ ವಿವಿಧ ಪಟ್ಟಿ ಓದಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯ ಶಿಕ್ಷಕ ಎ. ಜಯಪ್ರಕಾಶ್ ಶೆಟ್ಟಿ ವಂದಿಸಿದರು. ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ ತಾರಾನಾಥ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪಕ ಪದ್ಮನಾಭ ಒಡಿಯೂರು ಸಹಕರಿಸಿದರು.

Related posts

Leave a Reply