Header Ads
Header Ads
Header Ads
Breaking News

ಆರನೇ ನಿಟ್ಟೆ ಕ್ರೀಡೋತ್ಸವ-2018  ದೇರಳಕಟ್ಟೆ ಕೆ.ಎಸ್. ಹೆಗ್ಡೆ ಅಡಿಟೋರಿಯಂನಲ್ಲಿ ಚಾಲನೆ

ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಬೆಳವಣಿಗೆಯ ದಿಸೆಯಲ್ಲಿ ವಿವಿಧ ಮಾಧ್ಯಮಗಳಾದ ಟಿವಿ. ಮೊಬೈಲ್ ಗಳಿಗೆ ವಿಪರೀತ ಜೋತು ಬೀಳದೆ ತಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ವೃದ್ಧಿಗಾಗಿ ಕ್ರೀಡೆಯಲ್ಲೂ ತೊಡಗಿಸಿಕೊಳ್ಳಬೇಕು ಎಂದು ನಿವೃತ್ತ ಕ್ರೀಡಾಪಟು, ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಪ್ರೊ. ಡಾ. ರವಿಚಂದನ್ ಹೇಳಿದರು.

ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಕ್ಷೇಮ ಕ್ಯಾಂಪಸ್ ನಲ್ಲಿ ಎರಡು ದಿನ ನಡೆಯಲಿರುವ ಆರನೇ ನಿಟ್ಟೆ ಕ್ರೀಡೋತ್ಸವ-2018 ನ್ನು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಡಿಟೋರಿಯಂನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ದ.ಕ. ಜಿಲ್ಲಾ ಬಾಸ್ಕೆಟ್ ಬಾಲ್ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ನವೀನ್ ಶೆಟ್ಟಿ ಮಾತನಾಡಿ ನಿಟ್ಟೆ ವಿವಿ ಶೈಕ್ಷಣಿಕ, ಆರೋಗ್ಯ ಕ್ಷೇತ್ರದ ಜೊತೆಗೆ ಕ್ರೀಡೆಗೂ ಹೆಚ್ಚಿನ ಮಹತ್ವ ಕೊಡುತ್ತಿದ್ದು ಆ ನಿಟ್ಟಿನಲ್ಲಿ ನಿಟ್ಟೆ ವಿವಿಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಅದೃಷ್ಟವಂತರು. ನಿಟ್ಟೆ ಕ್ಯಾಂಪಸ್ ನಲ್ಲಿರುವ ಬಾಸ್ಕೆಟ್ ಬಾಲ್ ತರಬೇತಿ ಕ್ರೀಡಾಂಗಣ ಅಂತರಾಷ್ಟ್ರೀಯ ಗುಣಮಟ್ಟದ್ದಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ನುಡಿದರು.

ನಿಟ್ಟೆ ವಿವಿ ಕ್ರೀಡಾ ಸಹ ಕಾರ್ಯನಿರ್ವಾಹಕ ಶ್ಯಾಮ ಸುಂದರ್, ಕ್ಷೇಮ ಡೀನ್ ಡಾ. ಪಿ.ಎಸ್. ಪ್ರಕಾಶ್, ಎ.ಬಿ. ಶೆಟ್ಟೆ ದಂತ ವಿಜ್ಞಾನ ಮಹಾವಿದ್ಯಾಲಯದ ಡೀನ್ ಪ್ರೊ. ಡಾ. ಯು.ಎಸ್. ಕೃಷ್ಣ ನಾಯಕ್, ನಿಟ್ಟೆ ಕಾಲೇಜ್ ಆಫ್ ನರ್ಸಿಂಗ್ ನ ಪ್ರಾಂಶುಪಾಲೆ ಡಾ. ಫಾತಿಮಾ ಡಿಸಿಲ್ವ, ನಿಟ್ಟೆ ಕಾಲೇಕಾಲೇಜ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲ ಡಾ. ಪಿ. ಧನೇಶ್, ನಿಟ್ಟೆ ವಿವಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಅನಿರ್ಬನ್ , ನಿಟ್ಟೆ ಗುಲಾಬಿ ಶೆಟ್ಟಿ ಔಷಧೀಯ ಮಹಾವಿದ್ಯಾಲಯದ ಉಪ ಪ್ರಾಂಶುಪಾಲ ಡಾ. ನಾರಾಯಣ ಚಾರುಲು , ಸ್ಪೀಚ್ ಆವ್ಯಂಡ್ ಹಿಯರಿಂಗ್ ವಿಭಾಗದ ಶ್ವೇತಾ, ನಿಟ್ಟೆ ವಿವಿ ಕ್ರೀಡಾ ಸಲಹೆಗಾರ ಡಾ. ಮುರಳಿ ಕೃಷ್ಣ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸುಮನ್ ಸನ್ನಿ ಕಾರ್ಯಕ್ರಮ ನಿರೂಪಿಸಿದರು.

Related posts

Leave a Reply