Header Ads
Breaking News

ಆರಾಧನೆಗೂ ಶ್ರೇಷ್ಠ ಆರೋಗ್ಯಕ್ಕೂ ಉತ್ತಮ ಬಿಲ್ವಪತ್ರೆ : ಉಡುಪಿಯ ಪೇಜಾವರ ಶ್ರೀ ಅಭಿಪ್ರಾಯ

ಆರಾಧನೆಗೂ, ಆರೋಗ್ಯಕ್ಕೂ ಶ್ರೇಷ್ಠವಾಗಿರುವ ಬಿಲ್ವ ಪತ್ರೆಯವನ್ನು ಮನೆಮನೆಗಳಲ್ಲಿ ನೆಟ್ಟು ಪೊಷಿಸುವಂತೆ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ. ಅರಣ್ಯ ಇಲಾಖೆ ಸಾಮಾಜಿಕ ಅರಣ್ಯ ವಿಭಾಗ ಉಡುಪಿ ಇವುಗಳ ಜಂಟಿ ಆಶ್ರಯದಲ್ಲಿ ಎಸ್ ಎಮ್‍ಎಸ್.ಪಿ ಸಂಸ್ಕøತ ಕಾಲೇಜಿನ ಎನ್‍ಎಸ್‍ಎಸ್ ಘಟಕಗಳ ಸಹಯೋಗದಲ್ಲಿ ಶ್ರೀ ಕೃಷ್ಣ ಜಯಂತೀ ಪ್ರಯುಕ್ತ ನಾಗರಿಕರು, ಭಕ್ತರಿಗೆ ಉಚಿತ ಬಿಲ್ವ ಪತ್ರೆ ಸಸಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಲಯ ಅರಣ್ಯಾಧಿಕಾರಿ ರವೀಂದ್ರ ಆಚಾರ್ಯ, ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ದೇವಾನಂದ ಉಪಾಧ್ಯಾಯ, ಪ್ರಾಚಾರ್ಯ ಡಾ ಎನ್ ಎಲ್ ಭಟ್, ಮಠದ ದಿವಾನ ಎಂ ರಘುರಾಮಾಚಾರ್ಯ, ಉದ್ಯಮಿ ಯಶ್ ಪಾಲ್ ಸುವರ್ಣ, ಉಪನ್ಯಾಸಕ ವರ್ಗ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *