Header Ads
Header Ads
Breaking News

ಆರೋಗ್ಯ ಶಿಬಿರಗಳು ಜನರಲ್ಲಿ ಆರೋಗ್ಯದ ಬಗ್ಗೆ ಅರಿವನ್ನು ಮೂಡಿಸುವಲ್ಲಿ ಸಹಕಾರಿ: ಡಾ. ಮುರಳೀಕೃಷ್ಣ

ಚಾರ್ಮಾಡಿ: ಶ್ರೀ ಧ.ಮಂ. ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ಬೆಳ್ತಂಗಡಿಯ ಮುಳಿಯ ಜ್ಯುವೆಲ್ಸ್ ಹಾಗೂ ಉಜಿರೆಯ ಸಂಪೂರ್ಣ ಟೆಕ್ಸ್‌ಟೈಲ್ಸ್ ನ ಪ್ರಾಯೋಜಕತ್ವದಲ್ಲಿ ಚಾರ್ಮಾಡಿಯ ದ.ಕ.ಜಿ.ಪಂ.ಉ.ಹಿ.ಪ್ರಾ. ಶಾಲೆಯಲ್ಲಿ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಶಿಬಿರವನ್ನು ಉದ್ಘಾಟಿಸಿದ ಕಕ್ಕಿಂಜೆಯ ಕೃಷ್ಣ ಆಸ್ಪತ್ರೆಯ ಡಾ. ಮುರಳಿಕೃಷ್ಣ ಮಾತನಾಡಿ, ಜನರು ಸೂಕ್ತವಾದ ಚಿಕಿತ್ಸೆಗಳ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಅದು ಅರಿವಿನ ಕೊರತೆಯಿಂದಲೂ ಆಗಿರಬಹುದು. ಇಂತಹ ಸಮಯದಲ್ಲಿ ಅದೂ ಚಾರ್ಮಾಡಿಯ ಜನತೆಗೆ ಉಚಿತ ಚಿಕಿತ್ಸಾ ಸೌಲಭ್ಯವನ್ನು ಒದಗಿಸಿ ಅವರ ಆರೋಗ್ಯವನ್ನು ಸುಧಾರಿಸುವಲ್ಲಿ ಎನ್.ಎಸ್.ಎಸ್. ನ ಪಾತ್ರ ಶ್ಲಾಘನೀಯ ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಸುಳ್ಯ ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರೊಫೆಸರ್ ಹಾಗೂ ವಿಭಾಗ ಮುಖ್ಯಸ್ಥ ಡಾ. ಎಂ.ಎಂ. ದಯಾಕರ್ ಮಾತನಾಡಿ, ಉತ್ತಮವಾದ ಆರೋಗ್ಯದಿಂದ ಉತ್ತಮವಾದ ದೇಶ ನಿರ್ಮಾಣ ಸಾಧ್ಯ. ಸ್ವಚ್ಛ ಪರಿಸರ ಹಾಗೂ ಸ್ವಚ್ಛ ಮನಸ್ಸು ನಮ್ಮ ಆರೋಗ್ಯವನ್ನು ಕಾಪಿಡಲು ಸಹಕಾರಿಯಾಗುತ್ತದೆ. ವೈಯುಕ್ತಿಕ ಸ್ವಚ್ಛತೆಗೆ ಹೆಚ್ಚು ಒತ್ತನ್ನು ನೀಡಬೇಕು ಎಂದು ನುಡಿದರು. ವೇದಿಕೆಯಲಿ ಚಾರ್ಮಾಡಿ ಗ್ರಾ.ಪಂ. ಸದಸ್ಯೆ ಕೇಶವತಿ, ಪ್ರಸಾದ ನೇತ್ರಾಲಯದ ಕಣ್ಣಿನ ವಿಶೇಷ ತಜ್ಞ ಡಾ. ಶ್ರೀತೇಜ, ಎಸ್.ಡಿ.ಎಂ. ಪ್ರಕೃತಿ ವಿಜ್ಞಾನ ಮತ್ತು ಯೋಗ ವಿಜ್ಞಾನ ಕಾಲೇಜಿನ ಡಾ. ಸ್ವಾತಿ, ಎಸ್.ಡಿ.ಎಂ. ಕಾಲೇಜಿನ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಆಭಿಜಿತ್ ಬಡಿಗೇರ್, ಡಾ. ಸಂದೀಪ್, ಡಾ. ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು. ಶಿಬಿರದಲ್ಲಿ ಸಾಮಾನ್ಯ ಚಿಕಿತ್ಸೆ, ಮೂಳೆರೋಗ, ಮಕ್ಕಳರೋಗ ತಜ್ಞರು, ಸ್ತ್ರೀರೋಗ ತಜ್ಞರು, ದಂತ ತಪಾಸಣೆ, ಕಣ್ಣಿನ ಪರೀಕ್ಷೆ, ಆಹಾರ ಚಿಕಿತ್ಸಾ ಸಮಾಲೋಚನೆ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಾಹಿತಿ, ಆಯುಷ್ಮಾನ್ ಕಾರ್ಡ್ ನೋಂದಾವಣೆ ಮುಂತಾದ ಸೌಲಭ್ಯಗಳನ್ನು ಆರೋಗ್ಯ ಶಿಬಿರದಲ್ಲಿ ಒದಗಿಸಲಾಗಿತ್ತು. ಉಜಿರೆಯ ಎಸ್.ಡಿ.ಎಂ. ಆಸ್ಪತ್ರೆ, ಸುಳ್ಯದ ಕೆ.ವಿ.ಜಿ. ದಂತ ಮಹಾವಿದ್ಯಾಲಯ, ಮಂಗಳೂರಿನ ಪ್ರಸಾಧ್ ನೇತ್ರಾಲಯ, ಎಸ್.ಡಿ.ಎಂ. ಯೋಗ ವಿಜ್ಞಾನ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಈ ಶಿಬಿರದಲ್ಲಿ ಊರವರು ಪಾಲ್ಗೊಂಡಿದ್ದರು. ಸ್ವಯಂಸೇವಕ ಹೇಮಂತ್ ನಿರೂಪಿಸಿದರು. ಯೋಜನಾಧಿಕಾರಿಗಳಾದ ಡಾ. ಲಕ್ಷ್ಮೀನಾರಾಯಣ್ ಸ್ವಾಗತಿಸಿ, ಪ್ರೊ. ಆಶಾಕಿರಣ್ ವಂದಿಸಿದರು.

Related posts

Leave a Reply

Your email address will not be published. Required fields are marked *