Header Ads
Header Ads
Breaking News

ಆರ್ಥಿಕವಾಗಿ ಹಿಂದುಳಿದ ಕುಟುಂಬದ ನೆರವಿಗೆ ನಿಂತ ಟ್ರಸ್ಟ್ ಎಲ್ಲರ ಸಹಕಾರದಿಂದ ಸುಸಜ್ಜಿತ ಮನೆ ನಿರ್ಮಾಣ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಹೇಳಿಕೆ

ಆರ್ಥಿಕವಾಗಿ ಹಿಂದುಳಿದ ಕುಟುಂಬದ ನೆರವಿಗೆ ನಿಂತ ಟ್ರಸ್ಟ್‌ನ ಕಾರ್ಯ ಜನಮೆಚ್ಚುವ ಕಾರ್ಯಕ್ರವಾಗಿದೆ, ಎಲ್ಲರ ಸಹಕಾರದಿಂದ ಸುಸಜ್ಜಿತ ಮನೆ ನಿರ್ಮಿಸಲಾಗಿದೆ ಎಂದು ಇಂಟರನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಹೇಳಿದ್ದಾರೆ.ಅವರು ಕೊಣಾಜೆ ಸಮೀಪ ಇಂಟರನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಹಾಗೂ ಗ್ರಾಮದ ಯುವಕರ ಸಹಕಾರದ ಜತೆಗೆ ನಳಿನಿ ಶೆಟ್ಟಿ ಎಂಬವರಿಗೆ ನಿರ್ಮಿಸಿಕೊಡಲಾದ ‘ಸದಾಶಯ’ ಮನೆಯನ್ನು ಹಸ್ತಾಂತರಿಸಿ ಮಾತನಾಡಿದರು.
ಉತ್ತಮ ಪರಿಸರದ ಜತೆಗೆ, ಸುಸಜ್ಜಿತ ಮನೆಯ ನಿರ್ಮಾಣವಾಗಿದೆ. ಎಲ್ಲರ ಒಗ್ಗೂಡುವಿಕೆ ಇದ್ದಲ್ಲಿ ಸಮಾಜಮುಖಿ ಕಾರ್ಯ ಯಶಸ್ವಿಯಾಗಲು ಸಾಧ್ಯ. ಟ್ರಸ್ಟ್ ಹಿಂದಿನಿಂದಲೂ ಅಶಕ್ತರ ಬಾಳಿಗೆ ಬೆಳಕಾಗುತ್ತಾ ಬಂದಿದೆ ಎಂದರು.ವನ್ಯ ಜೀವಿ ಸಂರಕ್ಷಣಾ ಮಂಡಳಿ ಅಧ್ಯಕ್ಷ ಕೊಡ್ಮಾಣ್ ರಾಮಚಂದ್ರ ಶೆಟ್ಟಿ, ಮಾಜಿ ಶಾಸಕ ಕೆ,ಜಯರಾಮ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ದೇವಿಚರಣ್ ಶೆಟ್ಟಿ , ವಿಜಯಲಕ್ಷ್ಮಿಬಿ. ಶೆಟ್ಟಿ, ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ರಾಜ್‌ಗೋಪಾಲ್ ರೈ, ಸಂಚಾಲಕ ಪ್ರಸಾದ್ ರೈ ಕಲ್ಲಿಮಾರ್ ಮೊದಲಾದವರು ಉಪಸ್ಥಿತರಿದ್ದರು.
ವರದಿ: ಆರೀಫ್ ಉಳ್ಳಾಲ

Related posts

Leave a Reply