Header Ads
Breaking News

ಆರ್ಥಿಕ ಹಿಂದುಳಿದ ವಿದ್ಯಾರ್ಥಿಗಳ ದತ್ತು ಪಡೆದ ದೇರಳಕಟ್ಟೆ ಹಳೇ ವಿದ್ಯಾರ್ಥಿ ಸಂಘ

 ಕಲಿತ ಶಾಲೆಯನ್ನೂ ಇನ್ನಷ್ಟು ಅಭಿವೃದ್ಧಿಪಡಿಸಬೇಕು ಅನ್ನುವ ತುಡಿತ. ಕಷ್ಟಕಾಲದಲ್ಲಿ ಕಲಿಯಲಾಗದೆ ತಾವಂತೂ ಕೆಲಸಕ್ಕೆ ಸೇರಿ ಶಿಕ್ಷಣ ಅರ್ಧದಲ್ಲೇ ನಿಲ್ಲಿಸಿದೆವು. ಆದರೆ ಮುಂದೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಬೇಕು ಅನ್ನುವ ಉದ್ದೇಶ ಇಟ್ಟುಕೊಂಡ ದೇರಳಕಟ್ಟೆಯ ನೇತಾಜಿ ಸುಭಾಷ್ ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿ ಸಂಘ ಅಪೂರ್ವ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ದಾನಿಗಳ ನೆರವು ಪಡೆದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಇಬ್ಬರು ವಿದ್ಯಾರ್ಥಿಗಳ ಕಾಲೇಜು ಶಿಕ್ಷಣದ ವೆಚ್ಚ ಭರಿಸಿ ದತ್ತು ಸ್ವೀಕಾರ ಮಾಡಿಕೊಂಡಿದ್ದಾರೆ.

 ಹೌದು. ಮಹಮ್ಮದ್ ಫಾಯಿಝ್ ಮತ್ತು ಶೆಹನಾಝ್ ಅನ್ನುವ ವಿದ್ಯಾರ್ಥಿಗಳು ಶೇ.85 ಕ್ಕಿಂತ ಅಧಿಕ ಅಂಕಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಸಿದ್ದರು. ಆದರೆ ಮಹಮ್ಮದ್ ಫಾಯಿಝ್ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಮನೆಯ ಜವಾಬ್ದಾರಿಯೂ ಆತನ ಮೇಲಿರುವುದರಿಂದ ಕಾಲೇಜು ಶಿಕ್ಷಣದ ವೆಚ್ಛ ಭರಿಸಲು ಮನೆಮಂದಿಯಿಂದ ಅಸಾಧ್ಯವಾಗಿತ್ತು. ಹಾಗೆಯೇ ವಿದ್ಯಾರ್ಥಿನಿ ಶೆಹನಾಝ್ ಕತೆಯೂ ಹಾಗೇ ಇತ್ತು. ಇದನ್ನು ಮನಗಂಡ ಹಳೇ ವಿದ್ಯಾರ್ಥಿ ಸಂಘದ ಸದಸ್ಯರು ದಾನಿ ಉದ್ಯಮಿ ಶಕೀಲ್ ದೇರಳಕಟ್ಟೆ ಅವರಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಕುರಿತು ತಿಳಿಸಿ, ಇಬ್ಬರ ಕಾಲೇಜು ಶಿಕ್ಷಣದ ವೆಚ್ಛದ ಜವಾಬ್ದಾರಿ ನೋಡುವಂತೆ ವಿನಂತಿಸಿಕೊಂಡಿದ್ದಾರೆ. ಇದನ್ನು ಒಪ್ಪಿದ ಶಕೀಲ್ ಅವರು ಇತ್ತಿಚೆಗೆ ಇಬ್ಬರು ವಿದ್ಯಾರ್ಥಿಗಳ ಸಂಪೂರ್ಣ ಕಾಲೇಜು ಶಿಕ್ಷಣದ ವೆಚ್ಚ ಚೆಕನ್ನು ಶಿಕ್ಷಕರ ಸಮ್ಮುಖದಲ್ಲಿ ವಿದ್ಯಾರ್ಥಿಯ ಪೊಷಕರಿಗೆ ಹಸ್ತಾಂತರಿಸಿದರು.

ಹಳೇ ವಿದ್ಯಾರ್ಥಿಗಳು ಸಂಘದ ಮೂಲಕ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದ್ದಾರೆ. ಊರಿನ ದಾನಿಗಳನ್ನು ಸಂಪರ್ಕಿಸಿ, ಶೈಕ್ಷಣಿಕ ಕಲಿಯಲು ಆಸಕ್ತಿಯಿದ್ದರೂ, ಧನಾತ್ಮಕ ಕೊರತೆಯಲ್ಲಿರುವ ಮಕ್ಕಳಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ. ಇದರಿಂದ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಪಡೆಯುವಂತಾಗಿದೆ.

ಪ್ರಾಥಮಿಕ ಶಾಲೆ ಮಂಜನಾಡಿಯಲ್ಲಿ ಮುಗಿಸಿ ಎಸ್ ಎಸ್ ಎಲ್ ಸಿ ಯಲ್ಲಿ ಶೇ.86 ಅಂಕ ಪಡೆದು ಪಾಸಾಗಿದ್ದೇನೆ. ಉತ್ತಮ ಅಂಕ ಗಳಿಸಲೆಂದೇ ಹಗಲಿರುಳು ಶ್ರಮ ಪಟ್ಟಿದ್ದೇನೆ. ಆದರೂ ಮನೆಯ ಸ್ಥಿತಿಯಿಂದ ಕಾಲೇಜು ಶಿಕ್ಷಣ ಪಡೆಯಲು ಅಸಾಧ್ಯ ಎಂದಾಗಿತ್ತು. ಮನೆಯವರನ್ನು ತಾನೇ ದುಡಿದು ಸಾಕುವಂತಹ ಸ್ಥಿತಿ ಯಿತ್ತು. ಆದರೆ ಹಳೇ ವಿದ್ಯಾರ್ಥಿ ಸಂಘ ತನ್ನನ್ನು ಪ್ರೋತ್ಸಾಹಿಸಿ ಕಾಲೇಜು ಶಿಕ್ಷಣ ಪಡೆಯುವಂತೆ ಮಾಡಿದೆ.  ವಿಷಯವನ್ನು ಆರಿಸಿದ್ದು, ವೈದ್ಯ ಅಥವಾ ಇಂಜಿನಿಯರ್ ಆಗುವ ಕನಸ್ಸು ಹೊಂದಿದ್ದೇನೆ.

ದೇರಳಕಟ್ಟೆ ಶಾಲೆಯ ಹಳೇ ವಿದ್ಯಾರ್ಥಿ ಸಂಘ ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ. ಇದೇ ರೀತಿಯಲ್ಲಿ ಎಲ್ಲಾ ಗ್ರಾಮದ ಶಾಲೆಗಳಲ್ಲೂ ಕಾರ್ಯಾಚರಿಸಿದಲ್ಲಿ ಅವಿದ್ಯಾವಂತರ ಸಂಖ್ಯೆಯೂ ಕಡಿಮೆಯಾಗುವುದರ ಜತೆಗೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಜವಾಹಾರ್ ಲಾಲ್ ನೆಹರು ಆಶಯವನ್ನು ಯುವಸಮುದಾಯ ಪಾಲಿಸುವ ಮೂಲಕ ಎಲ್ಲಾ ಊರುಗಳಲ್ಲಿ ಇಂತಹ ಕಾರ್ಯಗಳು ಆಗಬೇಕಿದೆ.

Related posts

Leave a Reply

Your email address will not be published. Required fields are marked *