Header Ads
Header Ads
Breaking News

ಆರ್ಮಿ ಪಡೆಗಳ ಉದ್ಯೋಗಕ್ಕಾಗಿ ವಿದ್ಯಾರ್ಥಿಗಳಿಗೆ ಸೆಮಿನಾರ್

ಸೈನ್ಯಪಡೆ, ಅರೆಸೈನಿಕ ಪಡೆ, ಕರ್ನಾಟಕ ಪೋಲಿಸ್ ಮತ್ತು ಖಾಸಾಗಿ ಭದ್ರತಾ ಉದ್ಯೋಗಗಳಿಗೆ ಪೂರ್ವ ನೇಮಕಾತಿ ಆಯ್ಕೆ ಕ್ಯಾಂಪ್ ಮತ್ತು ಆರ್ಮಿ ಪಡೆಗಳ ಉದ್ಯೋಗಗಳಿಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಸೆಮಿನಾರ್ ನೀಡಲು ಭಾರತದ ನಂಬರ್ ವನ್ ತರಬೇತಿ ಸಂಸ್ಥೆ ಎನ್‌ಎಪಿಟಿ ಉದ್ದೇಶಿಸಿದೆ ಎಂದು ಎನ್‌ಎಪಿಟಿ ಸಾರ್ವಜನಿಕ ಸಂರ್ಪಕಾಧಿಕಾರಿ ಸಂಜಯ್ ಶೆಟ್ಟಿ ಮಂಗಳೂರು ಹೇಳಿದರು.

ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಆರ್ಮಿ ಪಡೆಗಳ ಆಯ್ಕೆ ಮತ್ತು ಉದ್ಯೋಗಕ್ಕಾಗಿ ತರಬೇತಿ ಮಂಗಳೂರಿನಲ್ಲಿ ನ್ಯಾಷನಲ್ ಅಕಾಡೆಮಿ ಆಫ್ ಪ್ರೀ ರಿಕ್ರೂಟ್‌ಮೆಂಟ್ ಟ್ರೈನಿಂಗ್ ಸಂಸ್ಥೆ ಆರಂಭಿಸಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ದೈಹಿಕ ಪರೀಕ್ಷೆಯ ಆಧಾರದ ಮೇಲೆ ಸೆಮಿನಾರ್ ನಡೆಯುತ್ತದೆ. ಎನ್‌ಎಪಿಟಿ ಸಂಸ್ಥೆ 12 ವರ್ಷಗಳ ಹಿಂದೆ ಕೇರಳದಲ್ಲಿ ಆರಂಭವಾಯಿತು. ಮಂಗಳೂರಿನಲ್ಲಿ ಕಳೆದ ವರ್ಷ ಆರಂಭಗೊಂಡ ಸಂಸ್ಥೆ ಹಲವು ಕಾರ್ಯಕ್ರಮಗಳನ್ನು ನೀಡಿದೆ. ಸುಳ್ಯದಲ್ಲಿ ಕಳೆದ ತಿಂಗಳು ೨೯ ರಂದು ಇದೇ ರೀತಿಯ ಸೆಮಿನಾರ್‌ಗಾಗಿ ಆಯ್ಕೆ ಕ್ಯಾಂಪ್ ನಡೆಸಲಾಗಿದೆ. ಆದರೆ ಇದರಲ್ಲಿ ವಿದ್ಯಾರ್ಥಿಗಳಲ್ಲಿ ಆದ ಗೊಂದಲದಿಂದಾಗಿ ಕೆಲವು ಘಟನೆಗಳು ನಡೆದಿದೆ. ಈಗಾಗಲೇ ಈ ಸಂಸ್ಥೆಯ ಮೂಲಕ ತರಭೆತಿ ಪಡೆದ 3000 ಅಭ್ಯರ್ಥಿಗಳು ವಿವಿಧ ಪಡೆಗಳಿಗೆ ಆಯ್ಕೆ ಆಗಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಎನ್‌ಎಪಿಟಿ ಅಕಾಡೆಮಿಯ ಅಧ್ಯಕ್ಷ ಮೋಹನ್ ಕೇರಳ, ಸ್ಥಳೀಯ ಮೆನೆಜರ್ ತ್ರಿಭುವನ್, ನಿವೃತ್ತ ಸೈನಿಕ ರಾಜಗೋಪಾಲ ಕೆ.ಪಿ, ವಿಠಲ್ ಉಪಸ್ಥಿತರಿದ್ದರು.

Related posts

Leave a Reply