Header Ads
Header Ads
Breaking News

ಆರ್ಯಾಪು ಸೊಸೈಟಿಯಲ್ಲಿ ಕಳಪೆ ಅಕ್ಕಿ ವಿತರಣೆ:ವಿ4ನ್ಯೂಸ್‌ನಲ್ಲಿ ಭಿತ್ತರಗೊಂಡ ವರದಿಗೆ ಸ್ಪಂದಿಸಿದ ಪಂ. ಅಧ್ಯಕ್ಷರು.

ಪುತ್ತೂರಿನ ಆರ್ಯಾಪು ಸೊಸೈಟಿಯಲ್ಲಿ ಕಳಪೆ ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಈ ಬಗ್ಗೆ ಸಮಗ್ರ ವರದಿಯನ್ನು ವಿ೪ ನ್ಯೂಸ್‌ನಲ್ಲಿ ಭಿತ್ತರಿಸಲಾಗಿತ್ತು. ವರದಿ ನೋಡಿದ ಅಲ್ಲಿನ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಅವರು ತಕ್ಷಣ ಸ್ಪಂದನೆ ನೀಡಿದ್ದಾರೆ. ಮಾತ್ರವಲ್ಲದೆ ಅಧಿಕಾರಿಗಳೊಂದಿಗೆ ಸೇರಿ ಸೂಕ್ತ ಕ್ರಮ ಕೈಗೊಂಡಿದ್ದಾರೆ.ಈ ಹಿಂದೆ ಬಂದ ಕಳಪೆ ಅಕ್ಕಿಯ ವರದಿಯು ಸತ್ಯಕ್ಕೆ ದೋರವಾದ ವಿಚಾರವಾಗಿದೆ. ಹಾಳಾದ ಅಕ್ಕಿಗಳ ಗೋಣಿಯನ್ನು ಬದಿಗೆ ಸರಿಸಿಟ್ಟರೂ ಅದು ಒಬ್ಬರು-ಇಬ್ಬರಿಗೆ ಮಾತ್ರ ಆ ಅಕ್ಕಿಯು ಹೋಗಿರುವುತ್ತದೆ. ಸಣ್ಣ-ಪುಟ್ಟ ತಪ್ಪುಗಳು ಆಗುತ್ತಿರುತ್ತದೆ. ಅದನ್ನು ದೊಡ್ಡದು ಮಾಡದೇ, ನಮ್ಮ ಗಮನಕ್ಕೆ ತಿಳಿಸಿ. ಹೀಗಾದರೇ ರೇಷನ್ ವಿತರಿಸುವುದನ್ನು ಕೈ ಬಿಡಲಾಗುವುದು ಎಂದರು. ಹಾಳಾಗಿರುವ ಅಕ್ಕಿಗಳನ್ನು ಆದಷ್ಟು ಬೇಗನೇ ಬದಲಾಯಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅವರೂ ಕೂಡ ಇದಕ್ಕೆ ಸ್ಪಂದಿಸಿದ್ದು ಆದಷ್ಟು ಬೇಗನೇ ಬದಲಾಯಿಸಿ ಕೊಡುತ್ತೇವೆ ಎಂದಿದ್ದಾರೆ. ಹಾಗಾಗಿ ಹಾಳಾದ ಕಳಪೆ ಅಕ್ಕಿಗಳ ಗೋಣಿಗಳನ್ನು ಬೇರೆನೇ ಇಡಲು ತಿಳಿಸಿದ್ದೇವೆ ಎಂದರು.

Related posts

Leave a Reply