Header Ads
Breaking News

ಆಳ್ವಾಸ್‌ನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ : ಸುಮಾರು 300 ವಿದ್ಯಾರ್ಥಿಗಳಿಂದ ಯೋಗಾಸನ

ಮೂಡುಬಿದಿರೆ : ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ವತಿಯಿಂದ ಮಿಜಾರಿನ ಆಳ್ವಾಸ್ ಎಂಜಿಯರಿಂಗ್ ಕಾಲೇಜಿನ ಎಂಬಿಎ ಅಡಿಟೋರಿಯಂನಲ್ಲಿ ಕಾಲೇಜಿನ 300 ವಿದ್ಯಾರ್ಥಿಗಳಿಂದ ಯೋಗಾಸನ ನಡೆಯಿತು. ಬೆಂಗಳೂರಿನ ಸೌಖ್ಯ ಪ್ರಕೃತಿ ಚಿಕಿತ್ಸಾ ಕೇಂದ್ರದ ಸಂಸ್ಥಾಪಕಿ ಡಾ/ಅಖಿಲಾ ಜೋಶಿ ದೀಪ ಬೆಳಗಿಸಿ ಯೋಗ ದಿನವನ್ನು ಉದ್ಘಾಟಿಸಿದರು. 

ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್‌ನ ಪ್ರಾಂಶುಪಾಲೆ ಡಾ/ ವನಿತಾ ಶೆಟ್ಟಿ, ಆಡಳಿತಾಧಿಕಾರಿ ಡಾ/ಪ್ರಜ್ಞಾ ಆಳ್ವ ಉಪಸ್ಥಿತರಿದ್ದರು.
ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್, ತಾಲೂಕು ಪತ್ರಕರ್ತರ ಸಂಘ ಮೂಡುಬಿದಿರೆ ಮತ್ತು ಜಿಲ್ಲಾ ಆಯುಷ್ ಇಲಾಖೆಯ ಆಶ್ರಯದಲ್ಲಿ ಯೋಗ ತರಬೇತಿಯು ವಿವಿಧ ಕಡೆಗಳಲ್ಲಿ ನಡೆಯುತ್ತಿದ್ದು ಸುಮಾರು ೧೫೦೦ ಜನರು ಯೋಗ ದಿನಾಚರಣೆಯ ಅಂಗವಾಗಿ ಯೋಗಭ್ಯಾಸ ನಡೆಸಿದರು.

Related posts

Leave a Reply

Your email address will not be published. Required fields are marked *