Header Ads
Header Ads
Breaking News

ಆಳ್ವಾಸ್‌ನಲ್ಲಿ ಎನ್‌ಸಿಸಿ ನೌಕದಳ ಶಿಬಿರ

ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ಎನ್‌ಸಿಸಿ ನೌಕದಳದ ವಾರ್ಷಿಕ ಶಿಬಿರ ಕಳೆದ ಆರು ದಿನಗಳಿಂದ ನಡೆಯುತ್ತಿದ್ದು, ಬುಧವಾರ ಕರ್ನಾಟಕ-ಗೋವಾ ಡೈರಕ್ಟರ್‌ನ ಎನ್‌ಸಿಸಿ ಡೆಪ್ಯುಟಿ ಡೈರೆಕ್ಟರ್ ಜನರಲ್ ಬ್ರಿಗೇಡಿಯರ್ ಡಿ.ಎಂ ಪೂರ್ವಿಮಠ್ ಬೇಟಿ ನೀಡಿ ಕೆಡೆಟ್‌ಗಳ ಜೊತೆ ಸಮಾಲೋಚನೆ ನಡೆಸಿದರು.
ನಂತರ ಕೆಡೆಟ್‌ಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಎನ್‌ಸಿಸಿ ಕೆಡೆಟ್‌ಗಳು ಶಿಬಿರದಲ್ಲಿ ಪಡೆಯುವ ಜ್ಞಾನ, ಶಿಸ್ತನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಎನ್‌ಸಿಸಿಯ ಮಹತ್ವ ಅರಿತು ಅದನ್ನು ಸದುಪಯೋಗಪಡಿಸಿಕೊಂಡರೆ ಅದರ ಪ್ರಯೋಜನವನ್ನು ಕೆಡೆಟ್‌ಗಳು ಮಾತ್ರವಲ್ಲ ಸಮಾಜ ಪಡೆಯಬಹುದು ಎಂದರು. ಗ್ರೂಪ್ ಕಮಾಂಡರ್ ಕರ್ನಲ್ ಅನಿಲ್ ನೌಟಿಯಲ್, ತರಬೇತಿ ಕಮಾಂಡರ್ ಲೆಫ್ಟಿನಲ್ ಕರ್ನಲ್ ಅಮಿತ್ ಅಸ್ತ್ರಿ, ಶಿಬಿರದ ಕಮಾಂಡರ್ ವಿಫುಲ್ ಗುಪ್ತಾ ಉಪಸ್ಥಿತರಿದ್ದರು.

   

Related posts

Leave a Reply