Header Ads
Header Ads
Header Ads
Breaking News

ಆಳ್ವಾಸ್‌ನಲ್ಲಿ ಗೈಲ್ ಇಂಡಿಯನ್ ಸ್ಪೀಡ್ ಸ್ಟಾರ್ ಫೆ.9 ರಿಂದ 11 ರ ವರೆಗೆ ಗೈಲ್ ರಫ್ತಾರ್-3 ಆಯ್ಕೆ ಪ್ರಕ್ರಿಯೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾಹಿತಿ

 

ಮೂಡುಬಿದಿರೆ: 2020 ಹಾಗೂ 2024 ಒಲಂಪಿಕ್ಸ್‌ಗಾಗಿ ರಾಷ್ಟ್ರಮಟ್ಟದಲ್ಲಿ ಕ್ರೀಡಾಪಟುಗಳ ಆಯ್ಕೆಗೆ ಪೂರಕವಾಗಿ ‘ಗೈಲ್ ಇಂಡಿಯನ್ ಸ್ಪೀಡ್ ಸ್ಟಾರ್, ಗೈಲ್ ರಫ್ತಾರ್-ಸೀಸನ್ 3 ಅನ್ನು ಕೇಂದ್ರ ಸರ್ಕಾರವು ಹಮ್ಮಿಕೊಂಡಿದ್ದು, ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಫೆ.9 ರಿಂದ 11 ರವರೆಗೆ ನಡೆಯಲಿದೆ ಎಂದು ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಮತ್ತು ಗೋವಾ ರಾಜ್ಯಗಳ 230 ವಿದ್ಯಾರ್ಥಿಗಳು ಭಾಗವಹಿಸಲಿದ್ದು ಇದರಲ್ಲಿ ಆಯ್ಕೆಯಾದ ಕ್ರೀಡಾಳುಗಳನ್ನು ರಾಷ್ಟ್ರ ಮಟ್ಟಕ್ಕೆ ಕಳುಹಿಸಲಾಗುವುದು. ಫೆಬ್ರವರಿ 09 ರಂದು ಬೆಳಗ್ಗೆ 9 ಗಂಟೆಯ ಒಳಗಡೆ ನೊಂದಾಣಿ ನಡೆಯಲಿದೆ. ಊಟದ ನಂತರದ ಅವಧಿಯಲ್ಲಿ ಒಟ್ಟು ಆಯ್ಕೆ ಪ್ರಕ್ರೀಯೆಯ ಆಯ್ಕೆ ವಿಧಾನಗಳು ಹಾಗೂ ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಉಪನ್ಯಾಸ ನಡೆಯಲಿದೆ. ಸಾಯಂಕಾಲ 4 ರಿಂದ 6 ರ ತನಕ ಮೈದಾನದಲ್ಲಿ ತರಬೇತಿ ನಡೆಯಲಿದೆ. ಫೆ. 10 ರಂದು ಬೆಳಿಗ್ಗೆ 6 ರಿಂದ 8 ರ ತನಕ ಮೈದಾನದಲ್ಲಿ ತರಬೇತಿ , ಸಾಯಂಕಾಲ 4.30 ಕ್ಕೆ ಉದ್ಘಾಟನೆ ಹಾಗೂ ತರಬೇತಿ ನಡೆಯಲಿದೆ. ಫೆ 11 ರಂದು ಬೆಳಿಗ್ಗೆ 8.00 ಗಂಟೆಗೆ ರಾಷ್ಟ್ರ ಮಟ್ಟಕೆ ಆಯ್ಕೆ ಪ್ರಕ್ರೀಯೆ ಸ್ವರಾಜ ಮೈದಾನದಲ್ಲಿ ನಡೆಯಲಿದೆ. ಈ ಆಯ್ಕೆ ಪಕ್ರಿಯು ಸಂಪೂರ್ಣ ಕಂಪ್ಯೂಟರ್ ಪೋಟೋ ಫಿನಿಕ್ಸಿಂಗ್ ಮೂಲಕ ನಡೆಯುತ್ತದೆ. ಆಯ್ಕೆಯಾದ ಎಲ್ಲಾ ಪ್ರತಿನಿಧಿಗಳು ಮುಂದಿನ ಆಯ್ಕೆಗಾಗಿ ದೆಹಲಿಯಲ್ಲಿ ನಡೆಯುವ ರಾಷ್ಟ್ರದಿಂದ ಓಲಂಪಿಕ್ಸ್ ಆಯ್ಕೆಗೆ ನಡೆಯುವ ಪ್ರಕ್ರಿಯೆಗೆ ಆಯ್ಕೆಯಾಗಲಿದಾರೆ ಎಂದರು.
ರಾಷ್ಟ್ರೀಯ ಯುವ ಸಹಕಾರಿ ಸಂಸ್ಥೆ(ಓಙ‌ಅS) ಸಮಾಜ ಕಾರ್ಯ ಸಂಸ್ಥೆ ಮುಖಾಂತರ 100, 200, ಮತ್ತು 400 ಮೀಟರ್ ವೇಗದ ಓಟಗಾರರನ್ನು ಸಂಪೂರ್ಣ ಪಾರದರ್ಶಕತೆಯ ಆಯ್ಕೆ ಪ್ರಕ್ರೀಯೆಯ ಮೂಲಕ 11-14 ಮತ್ತು 15-17 ವರ್ಷದೊಳಗಿನ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಕರ್ನಾಟಕ ಮತ್ತು ಗೋವಾ ರಾಜ್ಯದಿಂದ ಆಗಮಿಸುವ ಎಲ್ಲಾ ಪ್ರತಿ ನಿಧಿಗಳಿಗೆ ಅಚ್ಚುಕಟ್ಟಿನ ವಸತಿ, ವಾಹನ, ಊಟ ಹಾಗೂ ತರಬೇತಿ ನೀಡುವ ವ್ಯವಸ್ಥೆಗಳನ್ನು ಆಳ್ವಾಸ್ ಸಂಸ್ಥೆಯ ವತಿಯಿಂದ ಕಲ್ಪಿಸಲಾಗುತ್ತದೆ. ಮುಂದಿನ 2020 ಮತ್ತು 2024 ರ ಒಲಿಲಂಪಿಕ್ಸ್ ನಲ್ಲಿ ಭಾರತವು ಅತಿ ಹೆಚ್ಚಿನ ಪದಕ ಪಡೆಯುವ ಕನಸು ನನಸಾಗಬೇಕೆಂಬುವುದು ಆಳ್ವಾಸ್ ಸಂಸ್ಥೆಯ ಆಶಯ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ೧೪ ಮಂದಿ ಭಾಗವಹಿಸಲಿದ್ದಾರೆ. ರಾಷ್ಟ್ರಮಟ್ಟದಲ್ಲಿ ಆಯ್ಕೆಯಾದ ಓಟಗಾರರಿಗೆ ಸರ್ವಶ್ರೇಷ್ಠ ಹುಸೈನ್ ಬೊಲ್ಟ್ ತರಬೇತಿ ನೀಡುವುದು ಅತ್ಯುತ್ತಮ ಅವಕಾಶ ಎಂದು ಡಾ.ಎಂ ಮೋಹನ ಆಳ್ವ ತಿಳಿಸಿದ್ದಾರೆ.

ನ್ಯಾಶನಲ್ ಯುವ ಕೊ-ಅಪರೇಟಿವ್ ಸೊಸೈಟಿ ಕರ್ನಾಟಕ ಸಂಚಾಲಕ ರಮೇಶ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪಿ‌ಆರ್‌ಒ ಡಾ.ಪದ್ಮನಾಭ ಶೆಣೈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related posts

Leave a Reply