Header Ads
Header Ads
Header Ads
Breaking News

ಆಳ್ವಾಸ್‌ನಲ್ಲಿ ‘ನಿಂಗೋಲ್ ಚಕೋಬ’ ಮಣಿಪುರಿ ಹಬ್ಬ ಮಿಜಾರ್ ಎ‌ಐ‌ಇಟಿ ಕ್ಯಾಂಪಸ್‌ನಲ್ಲಿ ಆಯೋಜನೆ ನರ್ಸಿಂಗ್ ವಿಭಾಗ ಮುಖ್ಯಸ್ಥೆ ಎಲ್ಸಾ ದೇವಿ ಉದ್ಘಾಟನೆ

ಮೂಡುಬಿದಿರೆ: ಆಳ್ವಾಸ್‌ನಲ್ಲಿ ಆಯೋಜಿಸಿರುವ ಮಣಿಪುರಿ ಹಬ್ಬ ಮಣಿಪುರಿ ಸಂಸ್ಕೃತಿಯನ್ನು ಚಿತ್ರಿಸಿ ಕೊಡುವುದಲ್ಲದೆ ಮಣಿಪುರಿ ಬಗ್ಗೆ ಇರುವ ಪೂರ್ವಾಗ್ರಹ ಪೀಡಿತ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುತ್ತದೆ” ಎಂದು ಮಣಿಪಾಲ ಕಾಲೇಜಿನ ನರ್ಸಿಂಗ್ ವಿಭಾಗದ ಮುಖ್ಯಸ್ಥೆ ಎಲ್ಸಾ ಸನಾತೊಂಬ ದೇವಿ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮಿಜಾರಿನ ಎ‌ಐ‌ಇಟಿ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಮಣಿಪುರಿ ಹಬ್ಬ ‘ನಿಂಗೋಲ್ ಚಕೋಬ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಣಿಪುರ ಶಿಕ್ಷಣ ಸಚಿವರಾದ ಥೋಕೋಮ್ ರಾಧೆಶಾಮ್ ಸಿಂಗ್ ವಿಡಿಯೋ ತುಣುಕು ಕಳುಹಿಸುವ ಮೂಲಕ ಹಬ್ಬದ ಆಚರಣೆಯನ್ನು ಬೆಂಬಲಿಸಿದ್ದಲ್ಲದೆ, ಕಾಲೇಜಿನ ಮುಖ್ಯಸ್ಥರಾದ ಮೋಹನ ಆಳ್ವರಿಗೆ ಕೃತಜ್ಞತೆ ತಿಳಿಸಿದರು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ,ಸಂಸ್ಕೃತಿ ವಿನಿಮಯ ಎರಡೂ ಕಡೆಯಿಂದ ಸಾಧ್ಯವಾಗಬೇಕು ಎಂದರು.ಆರ್‌ಎಸ್‌ಎಸ್ ಪೂರ್ವಾಂಚಲ ಸಂಘಟಕರಾದ ಪುಪ್ಪುರಾಜ್, ನಿಟ್ಟೆ ವಿಶ್ವವಿದ್ಯಾನಿಲಯದ ಸಂಶೋಧನ ವಿಭಾಗದ ಅನಿರ್ಬನ್ ಚಕ್ರವರ್ತಿ ಹಾಗೂ ಗುನಿಮಾಲ ಚಕ್ರವರ್ತಿ ಉಪಸ್ಥಿತರಿದ್ದರು ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ನಾಟಕ, ನೃತ್ಯ, ಸಂಗೀತ, ಸಾಹಸ ಪ್ರದರ್ಶನ ನಡೆಯಿತು. ವಿಶೇಷ ಆಕರ್ಷಣೆಯಾಗಿ ಮಣಿಪುರದ ಖಾದ್ಯಗಳಾದ ಛಿಂಜೊ ಉತಿ, ಎರೊಂಬಾ, ಕೊಂಗ್‌ಹೌ, ಹಿಯೊಂಥೊವಾ ಮೊಯ್‌ರಾಂಗುಗಳ್ಳನ್ನೊಳಗೊಂಡ ಅದ್ಧೂರಿ ಭೋಜನವನ್ನು ಏರ್ಪಡಿಸಲಾಗಿತ್ತು. ನಿಂಗೊಲ್ ಚಕೋಬ ಆಚರಣೆಯ ಮೂಲಕ ಮಣಿಪುರ ರಾಜ್ಯದ ಸಂಸ್ಕೃತಿ, ಸಂಪ್ರದಾಯವನ್ನು ಕನ್ನಡಿಗರಿಗೆ ಪರಿಚಯಿಸುವ ಪ್ರಯತ್ನ ನಡೆಯಿತು.

Related posts

Leave a Reply