Header Ads
Header Ads
Breaking News

ಆಳ್ವಾಸ್‌ನಲ್ಲಿ 11ನೇ ದ್ವೈವಾರ್ಷಿಕ ಲೇಕ್ ಸಮ್ಮೇಳನ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಎನರ್ಜಿಆಂಡ್ ವೆಟ್‌ಲ್ಯಾಂಡ್ಸ್‌ರೀಸರ್ಚ್‌ಗ್ರೂಪ್- ಸೆಂಟರ್ ಫಾರ್‌ಇಕಾಲೋಜಿಕಲ್ ಸೈನ್ಸೆಸ್, ಭಾರತೀಯ ವಿಜ್ಞಾನಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಳ್ವಾಸ್ ಕಾಲೇಜಿನ ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ 11ನೇ ದ್ವೈವಾರ್ಷಿಕ ಲೇಕ್ ಸಮ್ಮೇಳನವನ್ನು ನಡೆಯಿತು.

ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಂರಕ್ಷಣಾ ಸಚಿವಾಲಯದ ಪ್ರಧಾನ ಸಲಹೆಗಾರ್ತಿ ಡಾ. ಆನಂದಿ ಸುಬ್ರಮಣಿಯನ್ ಸಮ್ಮೇಳನವನ್ನು ಉದ್ಘಾಟಸಿ ಮಾತನಾಡಿ “ನಗರೀಕರಣದ ಹೆಚ್ಚುವಿಕೆ ಹಾಗೂ ಜಾಗತಿಕ ತಾಪಮಾನದ ಏರಿಕೆಯೇ ನಮ್ಮ ಮುಂದಿರುವ ಮೂಲಭೂತ ಸಮಸ್ಯೆಗಳಾಗಿವೆ. ಇವುಗಳನ್ನು ನಿವಾರಿಸದ ಹೊರತು ಪರಿಸರ ವೈಪರೀತ್ಯಗಳ ತಡೆಗಟ್ಟುವಿಕೆ ಅಸಾಧ್ಯ” ಎಂದು ಅಭಿಪ್ರಾಯಪಟ್ಟರು. ಮಂಗಳೂರು ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮ್ಮೇಳನ ಇನ್ನು ಮೂರು ದಿನಗಳ ಕಾಲ ನಡೆಯಲಿದ್ದು ಅಂತರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು ಇಲ್ಲಿ ಭಾಗವಹಿಸಲಿದ್ದಾರೆ. 20ತಾಂತ್ರಿಕ ಚರ್ಚೆಗಳು, ವಿದ್ಯಾರ್ಥಿಗಳಿಂದ ಪೇಪರ್ ಪ್ರೆಸೆಂಟೇಶನ್‌ಗಳು ಹಾಗೂ ಪ್ರಾತ್ಯಕ್ಷಿಕೆಗಳು ನಡೆಯಲಿವೆ. ಹಿರಿಯ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಲೇಕ್ ಸಮ್ಮೇಳನದ ಭಾಗವಾಗಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ನಡೆಸಿದ ನೈಸರ್ಗಿಕ ಸಂಪನ್ಮೂಲಗಳ ನಕ್ಷೆಯಿರುವ ಭಿತ್ತಿಚಿತ್ರ, ಈ ಸಂಶೋಧನೆಯ ಸಂಪೂರ್ಣ ಮಾಹಿತಿಯನ್ನು ಹೊಂದಿರುವ ಹೊತ್ತಿಗೆ ಹಾಗೂ ಅದರಡಿಜಿಟಲ್‌ರೂಪಾಂತರವನ್ನುಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಅಲ್ಲದೇ ಜೀವ ವೈವಿಧ್ಯಕ್ಷೇತ್ರದಲ್ಲಿ ಸದಾ ತಮ್ಮ ಅಮೂಲ್ಯ ಕೊಡುಗೆ ಸಲ್ಲಿಸಿದ ನಾಲ್ವರು ಅಧ್ಯಾಪಕರಾದ ಯಲಹಂಕಾದ ಉಮಾಮೋಹನ್, ಬೆಂಗಳೂರಿನ ಶ್ರೀವಿದ್ಯಾ, ಕೆನಡಾದ ರಾಜಶೇಖರಮೂರ್ತಿ ಹಾಗೂ ಹೈದರಾಬಾದ್‌ನ ನರೇಂದ್ರ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.

. ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ವಾಗ್ದೇವಿ ವಿಲಾಸ್‌ಇನ್ಟಿಟ್ಯೂಷನ್‌ನ ಅಧ್ಯಕ್ಷಡಾ. ಹರೀಶ್‌ಕೃಷ್ಣಮೂರ್ತಿ, ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಂರಕ್ಷಣಾ ಸಚಿವಾಲಯದ ಕುಮಾರ್‌ರಜನೀಶ್, ಕರ್ನಾಟP ರಾಜ್ಯದ ಆರೋಗ್ಯ ಆಯುಕ್ತ ಪಂಕಜ್ ಪಾಂಡೆ, ವರ್ತೂರು ಕೆ. ಕೆ. ಪ್ರೌಢ ಶಾಲೆಯ ಪ್ರಾಂಶುಪಾಲ ಎಂ. ಎ. ಖಾನ್‌ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related posts

Leave a Reply