Header Ads
Header Ads
Breaking News

ಆಳ್ವಾಸ್ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ವಿಚಾರ ಸಂಕಿರಣ

ಮೂಡಬಿದರೆಯ ಆಳ್ವಾಸ್ ಕಾಲೇಜಿನ ಆಹಾರ ವಿಜ್ಞಾನ ಮತ್ತು ಪೋಷಣೆ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದಿಂದ “ಆಹಾರ ಭದ್ರತೆ ಕಾರ್ಯವಿಧಾನಗಳು ಪೋಷಕಾಂಶಗಳು – ಅಗತ್ಯ, ಪ್ರಸ್ತುತತೆ ಸವಾಲುಗಳು ಹಾಗೂ ಆಯಾಮಗಳು” ಎಂಬ ವಿಷಯದ ಕುರಿತು Éಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದ್ದರು.ಭಾರತ ಮತ್ತು ಶ್ರೀಲಂಕಾದ ಗ್ರಾಮ ಪಿಝ್ಜಾ ಕ್ರಾಪ್ಟ್ ಪ್ರೈ. ಲಿ.ನ ಆಡಳಿತ ನಿರ್ದೇಶಕ ಮತ್ತು ನಿರ್ದೇಶಕರಾದ ಶ್ರೀ ಅಮರ್ ರಾಜ್ ಸಿಂಗ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು,. ಭಾರತದಲ್ಲಿ ಶೇ. 31 ರಷ್ಟು ಜನ ಕಡಿಮೆ ತೂಕದವರಿದ್ದಾರೆ ದಿನವೂ 300 ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಇದಕ್ಕೆಲ್ಲ ಇಲ್ಲಿನ ಆಹಾರ ಮಾರುಕಟ್ಟೆಯ ಶೇ. 90 ರಷ್ಟು ಭಾಗ ಯಾವುದೇ ನಿಯಂತ್ರಣಗಳನ್ನು ಪಾಲಿಸದೆ ಇರುವುದೇ ಕಾರಣ ಹಾಗೂ ಆಹಾರ ವಿಷಯದಲ್ಲಿ ಮಾರ್ಗದರ್ಶಿ ನಿಬಂಧನೆಗಳನ್ನು ಪಾಲಿಸುವ ಜತೆಗೆ ಆಹಾರ ವಿಜ್ಞಾನದಲ್ಲಿ ಭಾರತೀಕರಣವನ್ನು ಸಾಧಿಸುವುದೂ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ವಿದ್ಯಾ ಸಂಸ್ಥೆಯ ಟ್ರಸ್ಟಿಯವರಾದ ಶ್ರೀ ವಿವೇಕ್ ಆಳ್ವರು ಆಹಾರ ಅಭ್ಯಾಸಗಳೊಂದಿಗೆ ಜೀವಿಸಿದ ನಮ್ಮ ಹಿರಿಯರು ಶತಾಯುಷಿಗಳಾಗಿದ್ದಾರೆ. ಆದರೆ ಅದನ್ನೆಲ್ಲ ಬದಿಗಿಟ್ಟು ಆಧುನಿಕ ಜೀವನ ಶೈಲಿಗೆ ಬದಲಾಗುತ್ತಿರುವ ಈಗಿನ ಜನತೆ ಅಲ್ಪಾಯುಷಿಗಳಾಗುತ್ತಿರುವುದರ ಕುರಿತು ಹೇಳಿದ ಅವರು ಈಗಿನ ಧಂಡಾ ಮತಲಬ್ ಕೋಕಕೋಲಾ ಎನ್ನುವ ಜನತೆಗೆ ಟೇಸ್ಟಿ ಮತಲಬ್ ಗಂಜಿ ಚಟ್ನಿ ಎಂಬ ಪ್ರಚಾರಾಂದೋಲನ ನಡೆಸಬೇಕು ಹಾಗೂ ಅನ್ಯದೇಶಗಳ ಶೋಧನಾ ತಂತ್ರಜ್ಞಾನಕ್ಕೆ ಗೋಚರಿಸಿದಂತೆ ಸಂರಕ್ಷಣಾ ಕ್ರಮಗಳನ್ನು ಭಾರತೀಯರು ಆಳವಡಿಸಿಕೊಳ್ಳಬೇಕಾಗಿದೆ ಎಂದು ಎಚ್ಚರಿಸಿದರು.

ಮುಖ್ಯ ಅತಿಥಿಯಾದ ಡಾ| ಕೆ.ಎಸ್. ಜಯಪ್ಪ ಮಾತನಾಡಿ ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಬೆಳೆಗಳನ್ನು ಬೆಳೆಸುವ ತುರ್ತು ಅಥವಾ ಅನಿವಾರ್ಯತೆ ಇರುವ ಪ್ರಸ್ತುತ ಸನ್ನಿವೇಶದಲ್ಲಿ ಸಾಗರೋತ್ಪನ್ನ ಮತ್ತು ಆಕ್ವಾ ಕಲ್ಚರ್‍ನ ಮೂಲಕ ಆಹಾರ ಪದಾರ್ಥಗಳನ್ನು ಬೆಳೆಸುವ ಸಾಧ್ಯತೆಗಳ ಕುರಿತು ಹೆಚ್ಚು ಪ್ರಾಮುಖ್ಯತೆ ನೀಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಮಂಗಳೂರು ವಿ.ವಿ.ಯ ಯೋಜನಾ ನಿರ್ದೇಶಕರಾದ ಡಾ| ಕೆ.ಎಸ್.ಜಯಪ್ಪ, ಆಳ್ವಾಸ್ ವಿದ್ಯಾ ಸಂಸ್ಥೆಯ ಟ್ರಸ್ಟಿಯವರಾದ ವಿವೇಕ್ ಆಳ್ವ. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲರಾದ ಡಾ| ಕುರಿಯನ್ ಹಾಗೂ ವಿಚಾರ ಸಂಕಿರಣದ ಮುಖ್ಯ ಸಂಯೋಜಕಿ ಡಾ| ಅರ್ಚನಾ ಪ್ರಭಾತರವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *