Header Ads
Header Ads
Breaking News

ಆಳ್ವಾಸ್ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ. ಪತ್ರಿಕೋದ್ಯಮದ ಅಸ್ಮಿತೆ ಮುದ್ರಣಾ ಮಾಧ್ಯಮದಲ್ಲಿ ಅಡಗಿದೆ.ಯು.ಕೆ. ಕುಮಾರನಾಥ್ ಅವರು ಉದ್ಘಾಟಸಿದರು

ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ, ಕುವೆಂಪು ಸಭಾಭವನದಲ್ಲಿ “ಪತ್ರಿಕಾ ದಿನಾಚರಣೆ’ ಕಾರ್‍ಯಕ್ರಮವನ್ನು ಆಯೋಜಿಸಲಾಯಿತು.ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದ ವಿಜಯ ಕರ್ನಾಟಕ ಪತ್ರಿಕೆಯ ಮಂಗಳೂರು ಸ್ಥಾನಿಕ ಸಂಪಾದಕರಾದ ಯು.ಕೆ. ಕುಮಾರನಾಥ್ ಉದ್ಘಾಟಸಿದರು. ನಂತರ ಮಾತನಾಡಿದ ಅವರು ಪತ್ರಿಕೋದ್ಯಮದ ಅಸ್ಮಿತೆ ಮುದ್ರಣಾ ಮಾದ್ಯಮದಲ್ಲಿ ಅಡಗಿದ್ದು, ಪತ್ರಿಕೋದ್ಯಮದ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನವನ್ನು ಮುದ್ರಣಾ ಮಾದ್ಯಮದಲ್ಲಿ ಪ್ರಾರಂಬಿಸಿದರೆ, ಮಾಧ್ಯಮ ಲೋಕದಲ್ಲಿ ಉನ್ನತ ಸ್ಥಾನವನ್ನು ಏರಬಹುದು ಎಂದು ತಿಳಿಸಿದರು.ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಮ್. ಮೋಹನ ಆಳ್ವ “ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಮಾದ್ಯಮಗಳ ಪಾತ್ರ ಬಹುಮುಖ್ಯವಾಗಿದ್ದು, ಪತ್ರಕರ್ತರು ರಚನಾತ್ಮಕ ಬರವಣಿಗೆಯ ಮೂಲಕ ಸುಸ್ಥಿರ ಸಮಾಜ ನಿರ್ಮಿಸಲು ಶ್ರಮಿಸಬೇಕು ಎಂದರು. ಕಾರ್‍ಯಕ್ರಮದಲ್ಲಿ ಮೂಡಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜೈಸನ್ ತಾಕೋಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆಗಳಾದ ಆಳ್ವಾಸ್ ಮಿರರ್, ಆಳ್ವಾಸ್ ಮಾದ್ಯಮ, ಬಿತ್ತಿ ಪತ್ರಿಕೆ ಸುದ್ದಿಮನೆ ಬಿಡುಗಡೆಗೊಳಿಸಲಾಯಿತು. ಪ್ರಾಂಶುಪಾಲರಾದ ಡಾ. ಕುರಿಯನ್, ಮಾನವಿಕ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಂಧ್ಯಾ ಕೆ.ಎಸ್, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯ ಜೀವನ್‌ರಾಮ್, ಪದವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರೇಷ್ಮಾ ಉದಯ್‌ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related posts

Leave a Reply