Header Ads
Header Ads
Breaking News

ಆಳ್ವಾಸ್ ಕಾಲೇಜಿನ ಕುವೆಂಪು ಭವನದಲ್ಲಿ ‘ಪತ್ರಿಕೋದ್ಯಮ ದಿನಾಚರಣೆ’ ಕಾರ್‍ಯಕ್ರಮ

ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪತ್ರಿಕೋಧ್ಯಮ ವಿಭಾಗದ ವತಿಯಿಂದ ‘ಪತ್ರಿಕೋದ್ಯಮ ದಿನಾಚರಣೆ’ಯ ಕಾರ್‍ಯಕ್ರಮ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರಿನ ಗ್ಲೋಬಲ್ ಟಿ.ವಿಯ ಸಂಸ್ಥಾಪಕ ಹಾಗೂ ನಿರ್ದೇಶಕರಾದ ಎನ್.ವಿ ಪಾವ್ಲೋಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ್ರು.ಬಳಿಕ ಮಾತನಾಡಿದ ಅವರು ಪತ್ರಕರ್ತರಾದವರಿಗೆ ವರದಿಗಾರಿಕೆ ಎನ್ನುವಂತದ್ದು ಕೇವಲ ವಿಷಯವನ್ನು ಪ್ರಸ್ತುತಪಡಿಸುವಿಕೆಯ ಮಾಧ್ಯಮವಾಗದೇ, ಓದುಗಾರರ ಮೇಲೆ ಧನಾತ್ಮಕ ಪ್ರಭಾವವನ್ನು ಬೀರುವಂತಹ ಸಾಧನವಾಗಬೇಕು ಎಂದು ಹೇಳಿದರು.

ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೇಣುಗೋಪಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಪತ್ರಿಕೋದ್ಯಮ ಎನ್ನುವುದು ಲಾಭದಯಕ ಹುದ್ದೆಯಲ್ಲವಾದರೂ, ಸಮಾಜದಲ್ಲಿ ಗೌರವ ಹಾಗೂ ಕೀರ್ತಿಯನ್ನು ತಂದುಕೊಡುವಂತಹ ಕ್ಷೇತ್ರ ಬೇರೊಂದಿಲ್ಲ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ವಿದ್ಯಾರ್ಥಿಗಳು ಪ್ರತಿಯೊಂದು ವಿಷಯದ ಕುರಿತು ಜ್ಞಾನವನ್ನು ಪಡೆಯುವ ಆಸಕ್ತಿ ಬೆಳೆಸಿಕೊಳ್ಳಬೇಕು ಮಾತ್ರವಲ್ಲ, ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಅವರ ಸಂಪೂರ್ಣ ವ್ಯಕಿತ್ವ ವಿಕಸನದಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ತಯಾರಿಸಿದ ಪ್ರಾಯೋಗಿಕ ಪತ್ರಿಕೆಗಳಾದ ಆಳ್ವಾಸ್ ಮಾಧ್ಯಮ, ಆಳ್ವಾಸ್ ವಿಶನ್, ಆಳ್ವಾಸ್ ಮಿರರ್ ಹಾಗೂ ಸುದ್ದಿಮನೆಯನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಡಾ/ಪ್ರೊ.ಕುರಿಯನ್, ಆಡಳಿತ ಅಧಿಕಾರಿ ಪ್ರೊ. ಬಾಲಕೃಷ್ಣ ಶೆಟ್ಟಿ, ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ,ಎಸ್, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಪ್ರೊ.ಶ್ರೀನಿವಾಸ ಪದವಿ ವಿಭಾಗದ ಮುಖ್ಯಸ್ಥೆ ರೇಷ್ಮಾ ಉದಯ್‌ಕುಮಾರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *