Header Ads
Header Ads
Breaking News

ಆಳ್ವಾಸ್ ಕಾಲೇಜಿನ ಮುಡಿಗೇರಿದ ಬೀಕ್ಸ್ ಚಾಂಪಿಯನ್‌ಶಿಪ್

ಮಂಗಳೂರು: ನಿಟ್ಟೆ ಇನ್ಸಿಟ್ಯೂಟ್ ಆಫ್ ಕಮ್ಯೂನಿಕೇಶನ್ ಕಾಲೇಜಿನಲ್ಲಿ ನಡೆದ ಎರಡು ದಿನಗಳ ಆರನೇ ಸಾಲಿನ ಬೀಕನ್ಸ್ ಮೀಡಿಯಾ ಫೆಸ್ಟ್‌ನ ಸಮಾರೋಪ ಸಮಾರಂಭವು ಶುಕ್ರವಾರ ಸಂಜೆ ಕಾಲೇಜು ಸಭಾಂಗಣದಲ್ಲಿ ಜರುಗಿತು.23 ಕಾಲೇಜುಗಳ 300ವಿದ್ಯಾರ್ಥಿಗಳು ಸುಮಾರು 13 ವಿಭಿನ್ನ ರೀತಿಯ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. ಕರ್ನಾಟಕ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯವಾದ ಗೋವಾದಿಂದಲೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಫೆಸ್ಟ್‌ನ ಚಾಂಪಿಯನ್ ಶಿಪ್ ಮೂಡಬಿದರೆಯ ಆಳ್ವಾಸ್ ಕಾಲೇಜಿನ ಮುಡಿಯೇರಿತು ಹಾಗೂ ಗೋವಾದ ಸೆಂಟ್ ಜೇವಿಯಸ್ ಕಾಲೇಜು ರನ್ನರ್ ಆಪ್ ಸ್ಥಾನ ತನ್ನದಾಗಿಸಿಕೊಂಡಿತು.ಈ ಸಮಾರಂಭದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೋ. ರವಿರಾಜ್ ಕಿಣಿ, ಬೀಕನ್ಸ್ ಮೀಡಿಯಾ ಫೆಸ್ಟ್‌ನ ಸಂಯೋಜಕರಾದ ಉಪನ್ಯಾಸಕಿ ವಿಲ್ಮಾ ಸೆರಾವೋ ಹಾಗೂ ಮಾನ್ಯ ವೆಂಕಟೇಶ್, ವಿಧ್ಯಾರ್ಥಿ ಸಂಘದ ಅಧ್ಯಕ್ಷೆ ರಿತಿಕಾ ಪ್ರಭು, ಸಾಂಸ್ಕೃತಿಕ ಸಂಘದ ಕಾರ್‍ಯದರ್ಶಿ ರಾಹುಲ್ ಜ್ಯೋತಿ ಉಪಸ್ಥಿತರಿದ್ದರು.

Related posts

Leave a Reply