Header Ads
Header Ads
Breaking News

ಆಳ್ವಾಸ್ ಕೃಷಿಸಿರಿಯಲ್ಲಿ ಗಮನ ಸೆಳೆದ ವಿವಿಧ ಪ್ರದರ್ಶನಗಳು ಜಾನುವಾರು ಪ್ರದರ್ಶನ, ಓಟದ ಕೋಣಗಳ ಸೌಂದರ್ಯ ಸ್ಪರ್ಧೆ ಓಟಗಾರರ ದೇಹ ಸೌಂದರ್ಯ ಸ್ಪರ್ಧೆ

ಮೂಡುಬಿದಿರೆ : ಆಳ್ವಾಸ್ ನುಡಿಸಿರಿಗೆ ಪೂರಕವಾಗಿ ನಾಲ್ಕು ದಿನಗಳ ವಿದ್ಯಾಗಿರಿಯ ಮುಂಡ್ರುದೆಗುತ್ತು ರಾಮಮೋಹನ ರೈ ಕೃಷಿ ಆವರಣದಲ್ಲಿ ನಡೆಯುತ್ತಿರುವ ಕೃಷಿಸಿರಿಯಲ್ಲಿ ಮೊದಲ ದಿನವಾಗಿರುವ ಶುಕ್ರವಾರದಂದು ವಿವಿಧ ತಳಿಯ ಜಾನುವಾರು ಪ್ರದರ್ಶನ, ಓಟದ ಕೋಣಗಳ ಸೌಂದರ್ಯ ಸ್ಪರ್ಧೆ ಹಾಗೂ ಓಟಗಾರರ ದೇಹ ಸೌಂದರ್ಯ ಸ್ಪರ್ಧೆಗಳು ನಡೆದವು.

ವಿಶೇಷ ಆಕರ್ಷಣೆಯಾಗಿ 120 ಕ್ಕೂ ಮಿಕ್ಕಿ ವಿದೇಶಿ ಪಕ್ಷಿಗಳು, 60 ಕ್ಕೂ ಮಿಕ್ಕಿ ಬೃಹತ್ ಗಾತ್ರದ ಮತ್ಸ್ಯಾಲಯಗಳು, 500 ಕ್ಕೂ ಮಿಕ್ಕಿ ಸಮುದ್ರ ಚಿಪ್ಪುಗಳು, 50 ಕ್ಕೂ ಮಿಕ್ಕಿ ಬೊನ್ಸಾಯಿ ಕೃಷಿ, 44 ತಳಿಗಳ ಬಿದಿರು ಗಿಡಗಳು, ಮತ್ತು 40 ತಳಿಗಳ ಬಿದಿರು, ನೈಜಿಲ್ಯಾಂಡ್ ಮೂಲದ ವಿಶಿಷ್ಠ ಬಣ್ಣಗಳ ಹಾಗೂ ಆಹಾರಕ್ಕಾಗಿ ಬಳಸುವ ಸಸ್ಯಗಳು , ಪುಷ್ಪ ಪ್ರದರ್ಶನ ಹಾಗೂ ತರಕಾರಿ ಮತ್ತು ಹಣ್ಣುಗಳಲ್ಲಿ ಕಲಾಕೃತಿಗಳು 250 ಕ್ಕೂ ಮಿಕ್ಕಿ ರಾಜ್ಯಮಟ್ಟದ ನರ್ಸರಿ ಮತ್ತು ಕೃಷಿ ಉಪಕರಣ ಮಾರಾಟ ಮಳಿಗೆಗಳು, ಕೃಷಿ ಸಂಬಂಧಿ ಗುಡಿಕೈಗಾರಿಕೆಗಳು ಹಾಗೂ 5 ಗೂಳಿಗಳು ಎಲ್ಲಾ ಜನರ ಗಮನ ಸೆಳೆಯುತ್ತಿದ್ದವು.