Header Ads
Header Ads
Breaking News

ಆಳ್ವಾಸ್ ಚಿತ್ರಸಿರಿ, ಛಾಯಾಚಿತ್ರಸಿರಿ, ವ್ಯಂಗ್ಯಚಿತ್ರಸಿರಿ ಪ್ರಶಸ್ತಿಗೆ ಮೂವರು ಗಣ್ಯರು ಆಯ್ಕೆ

ಮೂಡುಬಿದಿರೆ: ಆಳ್ವಾಸ್ ನುಡಿಸಿರಿ 2018ರ ಅಂಗವಾಗಿ ನಡೆಯುವ ಆಳ್ವಾಸ್ ಚಿತ್ರಸಿರಿ, ವ್ಯಂಗ ಚಿತ್ರಸಿರಿ ನಡೆಯಲಿದ್ದು, ಮೂರೂ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಮೂವರು ಸಾಧಕರನ್ನು ಇದೇ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರಶಸ್ತಿಯೊಂದಿಗೆ ಗೌರವಿಸಲಿದೆ. ಮಂಗಳೂರಿನ ಗಣೇಶ್ ಸೋಮಯಾಜಿ ಅವರಿಗೆ ಆಳ್ವಾಸ್ ಚಿತ್ರಸಿರಿ ಪ್ರಶಸ್ತಿ, ಖ್ಯಾತ ವನ್ಯಜೀವಿ ಛಾಯಾಚಿತ್ರಗ್ರಾಹಕ ಎಸ್.ತಿಪ್ಪೇಸ್ವಾಮಿ ಅವರಿಗೆ ಆಳ್ವಾಸ್ ಛಾಯಾಚಿತ್ರಸಿರಿ ಪ್ರಶಸ್ತಿಹಾಗೂ ವ್ಯಂಗ್ಯಚಿತ್ರ ಪ್ರವೀಣರಾದ ಕೆ.ಆರ್.ಸ್ವಾಮಿ ಅವರಿಗೆ ಆಳ್ವಾಸ್ ವ್ಯಂಗ್ಯಚಿತ್ರಸಿರಿ ಪ್ರಶಸ್ತಿ ಘೋಷಿಸಲಾಗಿದೆ.

ಪ್ರತಿಯೊಂದು ಪ್ರಶಸ್ತಿಯು ರೂ 25,000 ನಗದು, ಪ್ರಶಸ್ತಿಪತ್ರ ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ. ನ.13ರಂದು ಬೆಳಗ್ಗೆ 11ಗಂಟೆಗೆ ವಿದ್ಯಾಗಿರಿಯ ಡಾ.ಎಸ್.ಆಚಾರ್ಯ ಸಭಾಂಗಣದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಆಯ್ದ ಛಾಯಾಚಿತ್ರಸಿರಿಯಲ್ಲಿ ಆಯ್ದ ಛಾಯಾಚಿತ್ರಗಳ ಪ್ರದರ್ಶನಗಳೂ ನಡೆಯಲಿವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ತಿಳಿಸಿದ್ದಾರೆ.

Related posts

Leave a Reply