Header Ads
Header Ads
Breaking News

ಆಳ್ವಾಸ್ ತಂಡಗಳಿಗೆ ಅವಳಿ ಪ್ರಶಸ್ತಿ 

ಮೈಸೂರಿನ ಚಾಮುಂಡಿ ವಿಹಾರ್‌ನಲ್ಲಿ ಜರುಗಿದ ರಾಜ್ಯಮಟ್ಟದ ದಸರಾಕ್ರೀಡಾಕೂಟದ ಪುರುಷರ ಹಾಗೂ ಮಹಿಳೆಯರ ಬಾಲ್-ಬ್ಯಾಡ್ಮಿಟನ್ ಪ್ರಶಸ್ತಿಯನ್ನು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ತಂಡ ಪಡೆದುಕೊಂಡಿದೆ.

ಲೀಗ್ ಹಾಗೂ ಸೂಪರ್ ಲೀಗ್ ಮಾದರಿಯ ಪಂದ್ಯಾಟದಲ್ಲಿ ಆಳ್ವಾಸ್ ಪುರುಷರ ತಂಡ ಸೂಪರ್ ಲೀಗ್‌ನ ಪಂದ್ಯಗಳಲ್ಲಿ ತುಮಕೂರಿನ ಗಾಂಧಿನಗರ ಸ್ಪೋಟ್ಸ್‌ಕ್ಲಬ್ ಹಾಗೂ ಮೈಸೂರು ತಂಡಗಳನ್ನು ನೇರ ಸೆಟ್‌ಗಳಿಂದ ಸೋಲಿಸಿ, ನಿರ್ಣಾಯಕ ಹಣಾಹಣಿಯಲ್ಲಿ ಬೆಂಗಳೂರಿನ ವಿಜಯನಗರ ಸ್ಪೋಟ್ಸ್‌ಕ್ಲಬ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಮಹಿಳೆಯರ ವಿಭಾಗದ ಸೂಪರ್ ಲೀಗ್ ಪಂದ್ಯಗಳಲ್ಲಿ ಹಾಸನ ಪೈ ಹಾಗೂ ತುಮಕೂರಿನ ಎಸ್.ಬಿ.ಬಿ.ಸಿ ತಂಡಗಳನ್ನು ನೇರ ಸೆಟ್‌ಗಳಿಂದ ಸೋಲಿಸಿದಲ್ಲದೆ, ಅಂತಿಮ ಲೀಗ್ ಪಂದ್ಯದಲ್ಲಿ ಬೆಂಗಳೂರಿನ ಜಯ ಸ್ಪೋಟ್ಸ್‌ಕ್ಲಬ್ ತಂಡವನ್ನು ಸೋಲಿಸಿ ರಾಜ್ಯ ದಸರಾಕ್ರೀಡಾಕೂಟದ ಬಾಲ್-ಬ್ಯಾಡ್ಮಿಟನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

Related posts

Leave a Reply