Header Ads
Header Ads
Breaking News

ಆಳ್ವಾಸ್ ತೇಜೋವಧೆಗೆ ಖಂಡನೆ: ಆಗಸ್ಟ್ ೧೨ರಂದು ಬೃಹತ್ ಹೋರಾಟ

 

ಮೂಡುಬಿದಿರೆ: ಕಾವ್ಯಾ ಪ್ರಕರಣದ ಸತ್ಯಾಸತ್ಯತೆಗಳನ್ನು ಅರಿಯದೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರಿಗೆ ಮಾಡುತ್ತಿರುವ ತೇಜೋವಧೆಯನ್ನು ವಿರೋಧಿಸಿ ಆಗಸ್ಟ್ ೧೨ರಂದು ಮೂಡುಬಿದಿರೆ ಪದ್ಮಾವತಿ ಕಲಾಮಂದಿರದಲ್ಲಿ ಬೃಹತ್ ಸಭೆಯನ್ನು ಹಮ್ಮಿಕೊಳ್ಳಲಾಗುವುದೆಂದು ಮೂಡುಬಿದಿರೆ ಕಲ್ಪವೃಕ್ಷ ಸಭಾಂಗಣದಲ್ಲಿ ನಡೆದ ಹೋರಾಟದ ಸಮಾಲೋಚನಾ ಸಭೆಯಲ್ಲಿ ಡಾ.ಎಂ ಮೋಹನ ಆಳ್ವ ಅವರ ಅಭಿಮಾನಿಗಳು ಹಾಗೂ ಮೂಡುಬಿದಿರೆಯ ನಾಗರಿಕರು ನಿರ್ಧರಿಸಿದರು.

ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಮಾತನಾಡಿ, ಮೃತ ವಿದ್ಯಾರ್ಥಿನಿ ಕಾವ್ಯಾ ಕುಟುಂಬಕ್ಕೆ ಆದ ನೋವಿಗೆ ನಾವು ಸ್ಪಂದಿಸಬೇಕು. ತನಿಖೆಯಲ್ಲಿ ತಪಿತಸ್ಥರೆಂದು ಕಂಡುಬಂದಲ್ಲಿ ಅವರಿಗೂ ಶಿಕ್ಷೆಯಾಗಬೇಕು. ಆದರೆ ಉನ್ನತ ಮಟ್ಟದ ಶಿಕ್ಷಣ ನೀಡುವುದರ ಮೂಲಕ ಮೂಡುಬಿದಿರೆಯನ್ನು ಮಾದರಿ ಶಿಕ್ಷಣ ಕೇಂದ್ರವನ್ನಾಗಿಸಿದ ಡಾ.ಎಂ ಮೋಹನ ಆಳ್ವ ಹಾಗೂ ಆಳ್ವಾಸ್ ಸಂಸ್ಥೆಯ ವಿರುದ್ಧ ಅಪ್ರಪ್ರಚಾರ ಮಾಡುವುದನ್ನು ಖಂಡಿಸಬೇಕು. ಸಹಸ್ರಾರು ಜನರು ಆಳ್ವಾಸ್ ಸಂಸ್ಥೆ ಬಗ್ಗೆ ಅಪಾರ ಗೌರವವನ್ನಿಟ್ಟುಕೊಂಡಿದ್ದಾರೆ. ಇದರ ಬಗ್ಗೆ ಸರಿಯಾದ ಪರಿಜ್ಞಾನವಿಲ್ಲದ ದೃಶ್ಯಮಾಧ್ಯಮಗಳು ಸುಳ್ಳು ಅಪಪ್ರಚಾರ ನಡೆಸಿವೆ. ಮಾಧ್ಯಮಗಳನ್ನು ಎಚ್ಚರಿಸುವ ಕೆಲಸ ಜನರಿಂದಾಗಬೇಕು ಎಂದರು.

ಹೋರಾಟದ ನೇತೃತ್ವವಹಿಸಿರುವ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಮಾತನಾಡಿ, ಕಾವ್ಯಾ ಕುಟುಂಬಕ್ಕೆ ನ್ಯಾಯ ಒದಗಿಸುವುದು ಎಲ್ಲರ ಕರ್ತವ್ಯ.ಅದಕೋಸ್ಕರ ಡಾ.ಎಂ ಮೋಹನ ಆಳ್ವ ಅವರು ಕೂಡ ತನಿಖೆಗೆ ಸಹಕರಿಸುತ್ತಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಆಳ್ವಾಸ್ ಸಂಸ್ಥೆ ಬಗ್ಗೆ ನಿರಂತರ ಅಪಪ್ರಚಾರ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಸಾಮಾಜಿಕ ಜಾಲತಾಣ ಹಾಗೂ ಮೂಡುಬಿದಿರೆ ಹೆಸರಿಗೆ ಚ್ಯುತಿ ಬರುವಂತೆ ಅಪ್ರಚಾರ ಮಾಡುತ್ತಿರುವವರ ವಿರುದ್ಧ ಬೃಹತ್ ಹೋರಾಟವನ್ನು ಹಮ್ಮಿಕೊಂಡಿದ್ದೇವೆ. ಶಿಕ್ಷಣ ಕ್ರಾಂತಿಯ ಮೂಲಕ ಕಳೆದ ಮೂವತ್ತು ವರ್ಷಗಳಿಂದ ಮೂಡುಬಿದಿರೆಯ ಸಮಗ್ರ ಅಭಿವೃದ್ಧಿಗೆ ಕಾರಣೀಕರ್ತರಾದ ಡಾ.ಎಂ ಮೋಹನ ಆಳ್ವರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರುವ ನಂಬಿಕೆಯಿದೆ ಎಂದು ಹೇಳಿದರು.
ವರದಿ: ಪ್ರೇಮಶ್ರೀ ಮೂಡಬಿದರೆ

Related posts

Leave a Reply