Header Ads
Header Ads
Breaking News

ಆಳ್ವಾಸ್ :ನನ್ನ ಕಥೆ- ನಿಮ್ಮ ಜೊತೆ ಕಾರ್‍ಯಕ್ರಮದಲ್ಲಿ ರಮೇಶ್ ಅರವಿಂದ್

ಮೂಡುಬಿದಿರೆ: ಆಳ್ವಾಸ್ ನುಡಿಸಿರಿಯ ಮೊದಲ ದಿನ ನಡೆದ ನನ್ನ ಕಥೆ- ನಿಮ್ಮ ಜೊತೆ ಕಾರ್‍ಯಕ್ರಮದಲ್ಲಿ ಚಲನಚಿತ್ರ ನಟ, ನಿರ್ದೇಶಕ ರಮೇಶ್ ಅರವಿಂದ್ ಜೀವನಾನುಭವವನ್ನು ಹಂಚಿಕೊಂಡರು.

ಈ ಜಗತ್ತಿನಲ್ಲಿ ಒಳ್ಳೆಯ ತಂದೆ-ತಾಯಿ ಸಿಗೋದಕ್ಕಿಂತ ದೊಡ್ಡ ಆಸ್ತಿಯಿಲ್ಲ. ಯೋಚಿಸುವ ರೀತಿ, ಮಾತು, ಕೆಲಸ, ಒಂದಾಗಿದ್ದರೆ ಮಾತ್ರ ಮನಶ್ಶಾಂತಿಯೆಂಬ ಯಶಸ್ಸು ಲಭಿಸುತ್ತಸದೆ. ಏನೇ ಮಾತನಾಡಿದರೂ ನಾವು ನಂಬಿಕೆಯಿಟ್ಟು, ಹೃದಯದಿಂದ ಮಾತನಾಡಬೇಕು ನಮ್ಮ ಕೊರತೆ ನಮಗೆ ಕಾಣದ ಈ ಕಾಲ ಘಟ್ಟದಲ್ಲಿ ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸಬೇಕು, ಬೇರೆಯವರ ಹಾದಿಯಲ್ಲಿ ನಡೆವ ಬದಲು ನಿಮ್ಮ ಹಾದಿಯಲ್ಲಿ ನೀವು ನಡೆದರೆ ಉತ್ತಮ.

ನಾವು ಅನುಭವಿಸುತ್ತಿರುವ ನರಕದ ಸ್ಥಳದಲ್ಲಿ ಆತ್ಮತೃಪ್ತಿ ಸಿಗುವ ಕೆಲಸ ದೊರಕಿದರೆ ಆ ನರಕವೂ ಸ್ವರ್ಗವಾಗುತ್ತದೆ. ಇವೆಲ್ಲದಕ್ಕೂ ಕಾರಣ ನಮ್ಮ ಯೋಚನೆ. ನಾವು ಮಾಡುವ ಕೆಲಸದಲ್ಲಿ ಶ್ರೇಷ್ಟತೆ ಇರಬೇಕು, ನಿರಂತರ ಅಧ್ಯಯನ, ಪ್ರಾಯೋಗಿಕ ಅನುಭವ ನಮ್ಮನ್ನು ಅನುದಿನ ಬೆಳೆಯುವಲ್ಲಿ ಸಹಕಾರಿಯಾಗುತ್ತದೆ ಎಂದರು.

ಮಕ್ಕಳಿಗೆ ಪ್ರಾರಂಭದಲ್ಲಿ ಮೌಲ್ಯ ಮತ್ತು ಜವಾಬ್ದಾರಿಯನ್ನು ಸರಿಯಾಗಿ ಕಲಿಸಬೇಕು. ಆಬಳಿಕ ಅವರರನ್ನು ಸ್ವತಂತ್ರವಾಗಿರುವುದಕ್ಕೆ ಬಿಡಬೇಕು. ಆಗ ಮಾತ್ರ ಆ ಮಗು ತನ್ನ ನಿಜವಾದ ಅಸ್ತಿತ್ವವನ್ನು ತೋರ್ಪಡಿಸುವದಕ್ಕೆ ಸಾಧ್ಯ ಎಂದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷೆ ಮಲ್ಲಿಕಾ. ಎಸ್. ಘಂಟಿ, ಆಳ್ವಾಸ್ ನುಡಿಸಿರಿಯ ಉಪಾಧ್ಯಕ್ಷ ಡಾ. ನಾ. ದಾಮೋದರ ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply