Header Ads
Header Ads
Header Ads
Breaking News

ಆಳ್ವಾಸ್ ವಿದ್ಯಾರ್ಥಿ ಸಿರಿ ಉದ್ಘಾಟನೆಗೆ ಮಂಡ್ಯ ರಮೇಶ್ ನ.30 ರಂದು ನಡೆಯಲಿರುವ ಕಾರ್ಯಕ್ರಮ

 

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುತ್ತಿರುವ ವಿದ್ಯಾರ್ಥಿ ಸಾಹಿತ್ಯ ಸಂಸ್ಕೃತಿ ಸಮ್ಮೇಳನ ಆಳ್ವಾಸ್ ವಿದ್ಯಾರ್ಥಿ ಸಿರಿ 2017 ರ ಉದ್ಘಾಟನೆಗೆ ಪ್ರಸಿದ್ಧ ರಂಗಕರ್ಮಿ, ಚಲನಚಿತ್ರ ನಟ ಮಂಡ್ಯ ರಮೇಶ್ ಆಗಮಿಸಲಿದ್ದಾರೆ.

ನವಂಬರ 30 ಗುರುವಾರ ಬೆಳಗ್ಗೆ 9.15 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಮ್ಮೇಳನ ಅಧ್ಯಕ್ಷತೆಯನ್ನು ಉಜಿರೆ ಎಸ್‌ಡಿ‌ಎಂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅರ್ಜುನ್ ಶೆಣೈ ವಹಿಸಲಿದ್ದಾರೆ. ಸಮಾರಂಭದಲ್ಲಿ ಆಳ್ವಾಸ್ ವಿದ್ಯಾರ್ಥಿ ಸಿರಿ ಪ್ರಶಸ್ತಿ ಪ್ರದಾನ ಹಾಗೂ ಕಾಸರಗೋಡು ಉತ್ತಮ ಕನ್ನಡ ಶಾಲೆ ಗೌರವ ಪ್ರದಾನ ನಡೆಯಲಿದೆ ಎಂದು ಡಾ. ಎಂ ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮ್ಮೇಳನದಲ್ಲಿ ವಿದ್ಯಾರ್ಥಿ ಉಪನ್ಯಾಸದಲ್ಲಿ ಪಳಕಳ ನೆನಪು ವಿಷಯದಲ್ಲಿ ಪ್ರದ್ಯುಮ್ನ ಮೂರ್ತಿ ಕಡಂದಲೆ, ನಾವು ಮತ್ತು ನಮ್ಮ ಹಿರಿಯರು ಎಂಬ ವಿಷಯದ ಜುರಿತು ರಚನಚಂದ್ರ, ಸಾಮಾಜಿಕ ಜಾಲತಾಣಗಳು, ಅರಿತು ಬಳಸಿದರೆ ಚೆನ್ನ ಎಂಬ ವಿಷಯದ ಕುರಿತು ಭೂಮಿಕಾ ಪ್ರಿಯದರ್ಶಿನಿ ಮಾತನಾಡಲಿದ್ದಾರೆ. ಹೊನ್ನವರದ ಜೈದೀಪ್ ಎಸ್ ಪ್ರಭು ಅವರಿಂದ ಹಾಸ್ಯ ಭಾಷಣ, ಮನುಜ ನೇಹಿಗ, ಅಯನಾ ವಿ. ರಮಣ್, ಪಂಚಮಿ ಮಾರೂರು, ಅನನ್ಯ ಬೆಳ್ತಂಗಡಿ ಮೊದಲಾದವರಿಂದ ವಿಶೇಷ ಪ್ರತಿಭಾ ಪ್ರದರ್ಶನ ನಡೆಯಲಿದೆ.

ಕಾಸರಗೋಡಿನ ಸನ್ನಿಧಿ.ಟಿ.ಪೆರ್ಲ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು ಮೈಸೂರಿನ ಅರ್ಜುನ್ ಶೆಣೈ, ಬೈಂದೂರಿನ ಜಿತಿನ್ ಜೋನಿ, ಮಳಲಿಯ ಚೈತ್ರ, ಕುಂಬಳೆಯ ಅನು‌ಒರಿಯ, ಕಟೀಲಿನ ಜೀವಿತ, ಆಳ್ವಾಸ್‌ನ ಸುರವಿ ಯು ಎಸ್, ಪುತ್ತೂರಿನ ಪ್ರಜ್ಞಾ ಎಂ ಆರ್ ಕವಿಗಳಾಗಿ ಭಾಗವಹಿಸಲಿದ್ದಾರೆ. ಗಿನ್ನೆಸ್ ದಾಖಲೆಯ ಪ್ರತಿಭೆ ಮಣಿಪಾಲದ ಪೃಥ್ವೀಶ್ ಕೆ ಪೇತ್ರಿ ಇವರಿಂದ ರೂಬಿಕ ಕ್ಯೂಬ್‌ಗಳಿಂದ ಭಾವಚಿತ್ರ ರಚನೆ, ಅಪೂರ್ವ ಮಳಿ ಮತ್ತು ಅಚಿಜನಾ ಮಳಿ ಇವರಿಂದ ಜಾದೂ ಪ್ರದರ್ಶನ, ಹರ್ಷಿಣಿ ಎಚ್ ಆರ್ ಇವರಿಂದ ಯೋಗ , ಶಿವಾನಿ ಎಂ ಕೆ ಇವರಿಂದ ಮಿಮಿಕ್ರಿ, ಕಾಸರಗೋಡಿನ ಆಕಾಂಕ್ಷ್ ರೈ ಯವರಿಂದ ಕೀಬೋರ್ಡ್, ಪಹ್ಲಾದ್ ಮೂರ್ತಿ ಕಡಂದಲೆ ಇವರಿಂದ ಏಕಪಾತ್ರಾಭಿನಯ, ಆಯುಷಿ, ಆರುಷಿ, ಅನನ್ಯ ಇವರಿಂದ ಬಾಲ ನಾಟ್ಯ ವೈಭವ, ಸಂಹಿತ ಅಡಿಗ ಇವರಿಂದ ಕಥಾಭಿನಯ, ಆಳ್ವಾಸ್‌ನ ಸಂಗೀತ ತಂಡದಿಂದ ವರ್ಷೋತ್ಸವ, ಕಟೀಲು ದುರ್ಗಾ ಮಕ್ಕಳ ಮೇಳದಿಂದ ಯಕ್ಷಗಾನದ ವಿರಳ ಪೂರ್ವರಂಗದ ಪ್ರಸಂಗಗಳು ಮೊದಲಾದ ಹಲವು ಕಾರ್ಯಕ್ರಮಗಳು ಸಮ್ಮೇಳನದಲ್ಲಿ ನಡೆಯಲಿದೆ.
ಸಾಯಂಕಾಲ ಉಡುಪಿಯ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿ ನಚಿಕೇತ ನಾಯಕ್ ಸಮಾರೋಪ ಭಾಷಣ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ಎಂ ಮೋಹನ ಆಳ್ವ ವಹಿಸಲಿದ್ದಾರೆ. ಸಾಯಂಕಾಲ 6.45 ರಿಂದ ಏಣಗಿ ಬಾಳಪ್ಪ ವೇದಿಕೆಯಲ್ಲಿ ಜೀವನ್ ರಾಂ ಸುಳ್ಯ ನಿರ್ದೆಶನದ ನಾಟಕ ಧಾಂ ಧೂಂ ಸುಂಟರಗಾಳಿ ನಡೆಯಲಿದೆ.

ಸಮ್ಮೇಳನದಲ್ಲಿ ಕರಾವಳಿಯ ಬೇರೆ ಬೇರೆ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳೇ ಸ್ವಾಗತ , ನಿರೂಪಣೆ, ವಂದನಾರ್ಪಣೆ ಹಾಗೂ ಕಾರ್ಯಕ್ರಮಗಳನ್ನು ನೀಡಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಸಕ್ತರು ಭಾಗವಹಿಸಬಹುದು ಎಂದು ಡಾ. ಎಂ ಮೋಹನ ಆಳ್ವರು ತಿಳಿಸಿದ್ದಾರೆ.

Related posts

Leave a Reply